ಮಾದಕ ವಸ್ತುಗಳ ಉತ್ಪಾದನೆಯಲ್ಲಿ ಆಫ್ಘನಿಸ್ತಾನ್‌ ಹಿಂದಿಕ್ಕಿದ ಮಯನ್ಮಾರ್!‌

masthmagaa.com:

ಮಾದಕ ವಸ್ತು ಹೆರಾಯಿನ್ ತಯಾರಿಕೆಯಲ್ಲಿ ಬಳಸೋ ಓಪಿಯನ್‌ ಉತ್ಪಾದನೆಯಲ್ಲಿ ನೆರೆಯ ರಾಷ್ಟ್ರ ಮಯಾನ್ಮಾರ್‌, ಆಫ್ಘನಿಸ್ತಾನವನ್ನ ಹಿಂದಿಕ್ಕಿದೆ. ವಿಶ್ವಸಂಸ್ಥೆಯ ಡ್ರಗ್ಸ್‌ ಮತ್ತು ಅಪರಾಧಗಳ ಕಚೇರಿ(UNODC) ಈ ವರದಿ ನೀಡಿ ಕಳವಳ ವ್ಯಕ್ತಪಡಿಸಿದೆ. ಮಯನ್ಮಾರ್‌, ಲಾವೋಸ್‌ ಹಾಗೂ ಥೈಲ್ಯಾಂಡ್‌ ಒಳಗೊಂಡ ʻಗೋಲ್ಡನ್‌ ಟ್ರೈಯಾಂಗಲ್‌ʼ ಎನ್ನಲಾಗೋ ಪ್ರದೇಶದಲ್ಲಿನ ಮಾದಕ ವಸ್ತುಹಳ ಉತ್ಪಾದನೆ ಹಾಗೂ ಸಾಗಾಣಿಕೆ ಹೆಚ್ಚಾಗ್ತಿದೆ ಅಂತ UNODC ಹೇಳಿದೆ. 2022ರಲ್ಲಿ ಮಯಾನ್ಮಾರ್‌ನಲ್ಲಿ 2.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 20 ಸಾವಿರ ಕೋಟಿ ರುಪಾಯಿಗಳ ಮಾದಕ ವಸ್ತುಗಳ ಉತ್ಪಾದನೆ ಆಗಿದ್ದು, ಈ ಆ ದೇಶದ ಆರ್ಥಿಕತೆಯ 4% ಎನ್ನಲಾಗ್ತಿದೆ. ಭಾರತದ ಜೊತೆ ಗಡಿ ಹಂಚಿಕೊಂಡಿರೋ ಕಚ್ಚಿನ್‌ ಹಾಗೂ ಚಿನ್‌ ರಾಜ್ಯಗಳಲ್ಲೂ ಇವುಗಳ ಉತ್ಪಾದನೆ ಹೆಚ್ಚಾಗ್ತಿದೆ ಅನ್ನೋ ಕಳವಳಕಾರಿ ವಿಚಾರ ಒಳಗೆ ಬಂದಿದೆ. ಕಳೆದ ವರ್ಷ ಆಫ್ಘನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಓಪಿಯಮ್‌ ಉತ್ಪಾದನೆಯನ್ನ ಬ್ಯಾನ್‌ ಮಾಡಿದೆ. ಆದ್ರೆ ಮಯನ್ಮಾರ್‌ನಲ್ಲಿ ಕಳೆದ ವರ್ಷ ಅಧಿಕಾರ ಹಿಡಿದಿರೋ ಸೈನ್ಯ ಇದನ್ನೇ ಬಂಡವಾಳ ಮಾಡ್ಕೊಳ್ತಿದೆ.

-masthmagaa.com

Contact Us for Advertisement

Leave a Reply