ಏಲಿಯನ್‌ಗಳ ಬಗ್ಗೆ ಕುತೂಹಲಕಾರಿ ಮಾಹಿತಿ ನೀಡಿದ ನಾಸಾ! ಏನದು?

masthmagaa.com:

ಭೂಮಿಯನ್ನ ಬಿಟ್ಟು ಬೇರೆ ಗ್ರಹಗಳಲ್ಲಿ ಜೀವಿಗಳು ವಾಸ ಅಗಿದ್ದಾವಾ..? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸದಲ್ಲಿ ಅನೇಕ ಆಸೆ ನಿರಾಸೆಗಳು ಎದುರಾದ್ರೂ ಮನುಷ್ಯನ ಉತ್ಸಾಹ-ಹುಡುಕಾಟ ಇಂದಿಗೂ ಕಡಿಮೆ ಆಗಿಲ್ಲ. ಇಲ್ಲಿಯವರೆಗೂ ಅನ್ಯಗ್ರಹ ಜೀವಿಗಳು ಇರುವ ಬಗ್ಗೆ ಯಾವುದೇ ರೀತಿಯ ನಿಖರ ಸಾಕ್ಷಿಗಳು ಸಿಕ್ಕಿಲ್ಲ. ಹಾಗಂತ ಇಲ್ಲಾ ಅನ್ನೋದಕ್ಕೂ ಯಾವುದೇ ಆಧಾರಗಳಿಲ್ಲ. ಕೆಲವೊಮ್ಮೆ ಹಾರೋ ತಟ್ಟೆಗಳು ಕೆಲವೊಮ್ಮೆ ಅಪರಚಿತ ವಸ್ತುಗಳು ಭೂಮಿಯ ಮೇಲೆ-ಆಕಾಶದಲ್ಲಿ ಹಾರಾಟ ಮಾಡಿ ಮನುಷ್ಯ ಪ್ರಾಣಿಯ ತಲೆ ಕೆಡಿಸ್ತವೆ. ಅದ್ರಲ್ಲೂ ಅನ್ಯಗ್ರಹ ಜೀವಿಗಳನ್ನ ಹುಡುಕುವಲ್ಲಿ ಅಮೆರಿಕದ ನಾಸ ವಿಜ್ಞಾನಿಗಳು ತಪಸ್ಸನ್ನೇ ಮಾಡ್ತಿದ್ದಾರೆ. ಇದೀಗ UFO ಅಂದ್ರೆ ಹಾರಾಡುವ ಅಪರಿಚಿತ ವಸ್ತುಗಳ ಕುರಿತ ವಿಡಿಯೋ ಫುಟೇಜ್‌ನ್ನ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ರಿಲೀಸ್‌ ಮಾಡಿದೆ. ಅನ್ಯಗ್ರಹ ಜೀವಿ ಅಥ್ವಾ ಅಪರಚಿತ ವಸ್ತುಗಳ ಕುರಿತು ಅಧ್ಯಯನ ನಡೆಸುತ್ತಿರುವ ನಾಸಾದ ತಂಡ, ಇದೇ ಮೊದಲ ಬಾರಿಗೆ ಸಾರ್ವಜನಿಕೆ ಸಭೆ ನಡೆಸಿದೆ. ಈ ವೇಳೆ ಮಧ್ಯಪ್ರಾಚ್ಯ ಪ್ರದೇಶದ ಮೇಲೆ ಗೋಳಾಕಾರದ UFO ಒಂದು ಹಾರಾಟ ನಡೆಸಿರುವ ವಿಡಿಯೋವನ್ನ ರಿಲೀಸ್‌ ಮಾಡಿದೆ. ಈ ಕುರಿತು ಪೆಂಟಗನ್‌ನ All-Domain Anomaly Resolution Office ನಿರ್ದೇಶಕ ಡಾ ಸೀನ್ ಕಿರ್ಕ್‌ಪ್ಯಾಟ್ರಿಕ್ ಮಾಹಿತಿ ನೀಡಿದ್ದಾರೆ. ʻಅಪರಿಚಿತ ವಸ್ತುಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಾನು ನೋಡಿದ ವಸ್ತು ಇದು. ಈ ಆಬ್ಜೆಕ್ಟ್‌ ಮಧ್ಯಪ್ರಾಚ್ಯದಲ್ಲಿ ಹಾರಾಡಿದೆʼ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ… ನಾವೆಲ್ಲಾ ಅಧ್ಯಯನ ನಡೆಸುತ್ತಿರುವ UFOಗೆ ಸಂಬಂಧಿಸಿದಂತೆ ಈ ವಿಡಿಯೋ ಫುಟೇಜ್‌ ಒಂದು ವಿಶಿಷ್ಟ ಉದಾಹರಣೆ. ಅಂದ್ರೆ ಆಗಾಗ ಈ ರೀತಿಯ ಹಾರುವ ವಸ್ತುಗಳು ನಮಗೆ ಕಾಣಿಸುತ್ತಾ ಇರುತ್ತವೆ. ಅದರಲ್ಲೇ ಇದು ಅತ್ಯಂತ ಇಂಟರೆಸ್ಟಿಂಗ್ ವಿಷಯಗಳಾಗಿವೆ ಅಂತ ವಿಜ್ಞಾನಿ ಹೇಳಿದ್ದಾರೆ. ಇನ್ನು ಅನ್ಯಗ್ರಹ ಜೀವಿಗಳ ಕುರಿತು ಅಧ್ಯಯನ ನಡೆಸಿದ ಈ ತಂಡ, ಒಂದು ವರ್ಷದ ಬಳಿಕ‌ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನ ಆಯೋಜಿಸಿದೆ. ಈ ವೇಳೆ UFOಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಕ್ಕೆ ಬರೋಕೆ ಆಗೋದಿಲ್ಲ. ಅವು ಇವೆ ಇದಾವೆ ಅಥವಾ ಇಲ್ಲ ಅನ್ನೋದಕ್ಕೂ ನಮಗೆ ಇದುವರೆಗೂ ಯಾವುದೇ ಎವಿಡೆನ್ಸ್‌ ಇಲ್ಲ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಜೊತೆಗೆ ಪ್ರತಿ ತಿಂಗಳು ಸುಮಾರು 50 ರಿಂದ 100 ಈ ರೀತಿಯ ಹಾರುವ ವಸ್ತುಗಳ ದೃಶ್ಯಗಳು ನೋಡೋಕೆ ಸಿಗುತ್ತವೆ. ಆದ್ರೆ ಅವುಗಳಲ್ಲಿ ಕೇವಲ 2 ರಿಂದ 3% ಹಾರುವ ವಸ್ತುಗಳನ್ನ ಮಾತ್ರ ನಾವು ಆಶ್ಚರ್ಯಕರ ಅಂತ ಪರಿಗಣಿಸಲು ಸಾಧ್ಯವಾಗುತ್ತೆ, ಅವು ಅನ್ಯಗ್ರಹದವರು ಅಂತ ನಮಗೆ ಕುತೂಹಲ ಮೂಡಿಸ್ತವೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ESA ಅಂದ್ರೆ European Space Agency ಕೂಡ ಮಂಗಳ ಗ್ರಹದಿಂದ ಜೀವಿಗಳ ಇರೋದ್ರ ಕುರಿತು ಮೆಸೇಜ್‌ ಸಿಗ್ನಲ್‌ ಒಂದು ಪಡೆದಿದ್ದು, ಅದನ್ನ ವಿವರಿಸುವಂತೆ ಜಗತ್ತಿನಾದ್ಯಂತ ಇರೋ ವಿಜ್ಞಾನಿಗಳನ್ನ ಕೇಳಿಕೊಂಡಿದೆ. ಇದೇ ಸಮಯದಲ್ಲೇ ನಾಸಾ ರಿಲೀಸ್‌ ಮಾಡಿರುವ ಈ UFO ವಿಡಿಯೋ ಫುಟೇಜ್‌ ಮಹತ್ವ ಪಡೆದುಕೊಂಡಿದ್ದು, ಅನ್ಯಗ್ರಹ ಜೀವಿಗಳ ಕುರಿತು ಇರುವ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply