ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಟೆಲಿಸ್ಕೋಪ್‌ ಜೇಮ್ಸ್‌ ವೆಬ್‌ನ ಮೊದಲ ಚಿತ್ರ ಬಿಡುಗಡೆ!

masthmagaa.com:

ವಿಶ್ವದ ಅತಿದೊಡ್ಡ ಬಾಹ್ಯಾಕಾಶ ಟೆಲಿಸ್ಕೋಪ್‌ ಜೇಮ್ಸ್‌ ವೆಬ್‌ ತನ್ನ ಮೊಟ್ಟ ಮೊದಲ ವೈಜ್ಞಾನಿಕ ಬಾಹ್ಯಾಕಾಶ ಚಿತ್ರವನ್ನ ಭೂಮಿಗೆ ಕಳುಹಿಸಿದೆ. 13 ಬಿಲಿಯನ್‌ ಅಂದ್ರೆ 1300 ಕೋಟಿ ವರ್ಷಗಳ ಹಿಂದಿನ ಬ್ರಹ್ಮಾಂಡದ ಆರಂಭದ ಹಂತದ ಆಳವಾದ ಮತ್ತು ತೀಕ್ಷ್ಣವಾದ ಅತಿಗೆಂಪು ಚಿತ್ರವನ್ನ ಈ ಟೆಲಿಸ್ಕೋಪ್‌ ಕ್ಲಿಕ್‌ ಮಾಡಿದೆ ಅಂತ ನಾಸಾ ಹೇಳಿದೆ. ಇನ್ನು ಜೇಮ್ಸ್‌ ವೆಬ್‌ನ ಈ ಮೊದಲ ಚಿತ್ರವನ್ನ ಅಮೆರಿಕ ಅಧ್ಯಕ್‌ ಜೋ ಬೈಡೆನ್‌ ಬಿಡುಗಡೆಗೊಳಿಸಿದ್ದು ವಿಶೇಷ. ಇನ್ನು ಸೆರೆಸಿಕ್ಕ ಈ ಚಿತ್ರ ಸಾವಿರಾರು ಗೆಲಕ್ಸಿಗಳಿಂದ ತುಂಬಿ ತುಳುಕುತ್ತಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply