ನೀರಜ್‌ ಚೋಪ್ರಾ ಜೊತೆಗೆ ತಿರಂಗಕ್ಕೆ ಹೆಗಲೊಡ್ಡಿದ ಪಾಕಿಸ್ತಾನದ ಸ್ಪರ್ಧಿ!

masthmagaa.com:

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಜಾವೆಲಿನ್‌ ಥ್ರೋನಲ್ಲಿ ಭಾರತದ ಗೋಲ್ಡನ್‌ ಬಾಯ್‌ ನೀರಜ್‌ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದೇ ವೇಳೆ ಇವರ ಮತ್ತೊಂದ್‌ ನಡೆ ಕ್ರೀಡಾ ಪ್ರೇಮಿಗಳ ಹೃದಯ ಗೆದ್ದಿದೆ. ಸ್ವರ್ಧೆ ಮುಗಿದ ಬಳಿಕ ನೀರಜ್‌ ಚೋಪ್ರಾ ಹಾಗೂ ಕಂಚಿನ ಪದಕ ವಿಜೇತ ಜಾಕೊಬ್‌ ವಾಡ್ಲಚ್‌ ಅವರು ತಮ್ಮ ತಮ್ಮ ದೇಶಗಳ ಭಾವುಟ ಹಿಡಿದು ಕ್ಯಾಮೆರಾಗೆ ಪೋಸ್‌ ನೀಡುತ್ತಿದ್ದರು. ಈ ವೇಳೆ ಬೆಳ್ಳಿ ಪದಕ ಗೆದ್ದಿದ್ದ ಪಾಕಿಸ್ತಾನದ ಅರ್ಷದ್‌ ನದೀಮ್‌ ಬಳಿ ಅವರ ಧ್ವಜ ಇರಲಿಲ್ಲ. ಆಗ ಅರ್ಷದ್‌ ಅವ್ರನ್ನ ಕರೆದು ಭಾರತದ ಭಾವುಟದ ಜೊತೆ ನಿಲ್ಲಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೀರಜ್‌ ಚೋಪ್ರಾಗೆ ಕ್ರೀಡಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಗೇಮ್‌ನಲ್ಲಿ ಇಬ್ಬರು ವೈರಿಗಳಾದ್ರೂ ಆಫ್‌ ಫೀಲ್ಡ್‌ನಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ನೀರಜ್‌ ಗೆಲುವಿನ ಬಳಿಕ ಮಾತಾಡಿದ ಅರ್ಷದ್‌, ನೀರಜ್‌ ಭಾಯ್‌ ಚಿನ್ನದ ಪದಕ ಗೆದ್ದಿರೋದು ತುಂಬಾ ಸಂತೋಷವಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಶ್ವದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ನೀರಜ್ ಮತ್ತು ನಾನು ಒಲಿಂಪಿಕ್ಸ್‌ನಲ್ಲೂ ಟಾಪ್ 2ರಲ್ಲಿ ಸ್ಥಾನ ಪಡೆಯಲಿ ಅಂತ ಪ್ರಾರ್ಥಿಸುತ್ತೇನೆ ಅಂತ ಹೇಳುವ ಮೂಲಕ ನದೀಮ್ ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

-masthmagaa.com

Contact Us for Advertisement

Leave a Reply