ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸುಪ್ರೀಂಕೋರ್ಟ್​ ಸಿಹಿಸುದ್ದಿ!

masthmagaa.com:

ಈಗಿರೋ ಒಬಿಸಿ ಮತ್ತು ಎಕನಾಮಿಕಲಿ ವೀಕರ್ ಸೆಕ್ಷನ್​- EWS ರಿಸರ್ವೇಷನ್ ಪ್ರಕಾರನೇ 2021-22ರ NEET-PG ಕೌನ್ಸಿಲಿಂಗ್ ನಡೆಸುವಂತೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈಗಿರೋ ಮೀಸಲಾತಿ ಪ್ರಕಾರ, ಒಬಿಸಿಗೆ 27 ಪರ್ಸೆಂಟ್​ ಮತ್ತು EWS ಕೆಟಗರಿಗೆ 10 ಪರ್ಸೆಂಟ್​ ಮೀಸಲಾತಿ ಇದೆ. ಸುಪ್ರೀಂಕೋರ್ಟ್​ನ ಆದೇಶದಿಂದ ವೈದ್ಯರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. ಅಂದ್ಹಾಗೆ ವಾರ್ಷಿಕವಾಗಿ 8 ಲಕ್ಷ ರೂಪಾಯಿಗಿಂತ ಕಮ್ಮಿ ಆದಾಯ ಇರೋರು ಎಕನಾಮಿಕಲಿ ವೀಕರ್ ಸೆಕ್ಷನ್​- EWS ಅಂತ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಇದನ್ನ ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ರು. ಇದರ ವಿಚಾರಣೆ ನಡೀತಿದ್ದರಿಂದ ನೀಟ್​ ಪಿಜಿ ಕೌನ್ಸಿಲಿಂಗ್​ ಕೂಡ ನಡೆದಿರಲಿಲ್ಲ. ಇದೀಗ ಕೋರ್ಟ್,​ ಸದ್ಯಕ್ಕೆ ಇದೇ ಕ್ರೈಟೀರಿಯಾವನ್ನ ಮೆಂಟೇನ್​ ಮಾಡಿ ಅಂತ ಹೇಳಿರೋದ್ರಿಂದ ಶೀಘ್ರದಲ್ಲೇ ಕೌನ್ಸಿಲಿಂಗ್ ನಡೆಯಲಿದೆ. 8 ಲಕ್ಷ ಆದಾಯ ಮಿತಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನ ಮಾರ್ಚ್ 5ನೇ ತಾರೀಖೆಗೆ ಮುಂದೂಡಿದೆ.

-masthmagaa.com

Contact Us for Advertisement

Leave a Reply