ರಷ್ಯಾ ಆಕ್ರಮಿತ ಕ್ರೈಮಿಯಾದಲ್ಲಿ ಮತ್ತೆ ಸ್ಪೋಟ, 12 ಜನರ ದುರ್ಮರಣ!

masthmagaa.com:

ರಷ್ಯಾ ಆಕ್ರಮಿತ ಕ್ರೈಮಿಯಾದಲ್ಲಿ ಮತ್ತೆ ಸ್ಪೋಟ ಸಂಭವಿಸಿದೆ. ರಷ್ಯಾ ಕ್ಷಿಪಣಿಯೊಂದು ಅಲ್ಲಿನ ವಸತಿ ಪ್ರದೇಶದಲ್ಲಿ ಬಂದು ಅಪ್ಪಳಿಸಿದೆ. ಘಟನೆಯಲ್ಲಿ 12 ನಾಗರಿಕರು ಗಾಯಗೊಂಡಿದ್ದಾರೆ ಅಂತ ವರದಿಯಾಗಿದೆ. ಇನ್ನು ಸ್ಪೋಟ ಅಲ್ಲಿನ Pivdennoukrainsk ಪರಮಾಣು ಸ್ಥಾವರದ ಹತ್ತಿರದಲ್ಲೇ ಸಂಭವಿಸಿದ್ದು, ಈ ಯುದ್ದದ ಟೈಮಲ್ಲಿ ಎಲ್ಲಿ ಪರಮಾಣು ವಿಕೋಪ ಉಂಟಾಗುತ್ತೋ ಅನ್ನೊ ಭಯ ಸೃಷ್ಟಿಸಿದೆ ಅಂತ ಯುಕ್ರೇನ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಕಳೆದ ವಾರ ಇಲ್ಲಿನ ರಷ್ಯಾದ ವಾಯುನೆಲೆಯಲ್ಲಿ ಸ್ಪೋಟಗಳು ಸಂಭವಿಸಿದ್ವು. ಇನ್ನು ಇತ್ತ ತನ್ನ ಕೆಲ ಸೈನಿಕರಿಗೆ ಯುಕ್ರೇನ್‌ ವಿಷ ನೀಡಿದೆ ಅಂತ ರಷ್ಯಾ ಆರೋಪಿಸಿದೆ. ಹಲವು ಯೋಧರನ್ನ ಸೇನಾ ಆಸ್ಪತ್ರೆಗೆ ದಾಖಲಿಸಿದಾಗ, ಅವರ ದೇಹದಲ್ಲಿ ವಿಷಕಾರಿ ವಸ್ತು ಬೊಟುಲಿನಮ್ ಟಾಕ್ಸಿನ್ ಟೈಪ್ ಬಿ ಇರೋದು ಕಂಡುಬಂದಿದೆ ಅಂತ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಜೊತೆಗೆ ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝಲೆನ್ಸ್ಕಿ ಈ ರೀತಿ ಕೆಮಿಕಲ್‌ ಟೆರರಿಸಮ್‌ ಮಾಡ್ತಿರೋದ್ರ ಕುರಿತು ರಷ್ಯಾ ಸಾಕ್ಷ್ಯಗಳನ್ನ ರೆಡಿ ಮಾಡ್ತಿದೆ ಅಂತ ಹೇಳಿದೆ. ಇನ್ನೊಂದ್‌ ಕಡೆ ಅಲ್ಬೇನಿಯಾದ ಸೇನಾ ನೆಲೆಗೆ ಪ್ರವೇಶ ಮಾಡೋದಕ್ಕೆ ಟ್ರೈ ಮಾಡ್ತಿದ್ದ ಇಬ್ಬರು ರಷ್ಯಾ ಪ್ರಜೆ ಹಾಗೂ ಓರ್ವ ಯುಕ್ರೇನ್‌ ಪ್ರಜೆಯನ್ನ ಅರೆಸ್ಟ್‌ ಮಾಡಲಾಗಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply