ರಷ್ಯಾ ಅಧ್ಯಕ್ಷ ಪುಟಿನ್‌ರ ಅಂತ್ಯ ಹತ್ತಿರದಲ್ಲಿದೆ! ಹೇಳಿದ್ಯಾರು?

masthmagaa.com:

ರಷ್ಯಾ-ಯುಕ್ರೇನ್‌ ಯುದ್ಧ ಎಷ್ಟು ಸುದ್ಧಿ ಮಾಡ್ತಾ ಇದ್ಯೋ..ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವ್ರ ಆರೋಗ್ಯ ವಿಚಾರ ಕೂಡ ಆಗಾಗ ಅಷ್ಟೇ ಸುದ್ಧಿ ಮಾಡ್ತಾ ಇದೆ. ಕ್ಯಾನ್ಸರ್‌ ವಿರುದ್ಧ ಹೋರಾಡ್ತ ಇರೋ ಪುಟಿನ್‌ ತಮ್ಮ ಖಾಯಿಲೆಗೆ ಪಾಶ್ಚಿಮಾತ್ಯ ಚಿಕಿತ್ಸೆಯನ್ನ ತೆಗೆದುಕೊಳ್ತಿದಾರೆ ಅಂತ ವರದಿಯಾಗಿದೆ. ವಿದೇಶಿ ಚಿಕಿತ್ಸೆ ಇಲ್ಲಾ ಅಂದಿದ್ರೆ ಪುಟಿನ್‌ಗೆ ಈ ರೀತಿ ರಷ್ಯಾದಲ್ಲಿ ಸಾರ್ವಜನಿಕವಾಗಿ ಬದುಕೋಕೆ ಆಗ್ತಿರ್ಲಿಲ್ಲ ಅಂತ ರಷ್ಯಾದ ಇತಿಹಾಸತಜ್ಞ ಹಾಗೂ ರಾಜಕೀಯ ವಿಶ್ಲೇಷಕ ವ್ಯಾಲೆರಿ ಸೊಲೊವಿ ಹೇಳಿದ್ದಾರೆ. ಪುಟಿನ್‌ಗೆ ವಿದೇಶಿ ಅಡ್ವಾನ್ಸ್ಡ್‌ಟ್ರೀಟ್‌ಮೆಂಟ್‌ ಕೊಡ್ತಾ ಇದ್ರೂ ಮುಂದಿನ ದಿನಗಳಲ್ಲಿ ಅವ್ರ ಆರೋಗ್ಯದ ಸ್ಥಿತಿ ಬಗ್ಗೆ ವೈದ್ಯರೂ ಗ್ಯಾರೆಂಟಿ ಕೊಡ್ತಾಯಿಲ್ಲ. ಪುಟಿನ್‌ರ ಅಂತ್ಯ ಹತ್ತಿರ ಬರ್ತಾ ಇದೆ ಅಂತ ಸೊಲೊವಿ ಹೇಳಿದ್ದಾರೆ. ಇನ್ನು ಕ್ಯಾನ್ಸರ್‌ ಜೊತೆ ಪಾರ್ಕಿನ್ಸ್‌ನ್ (Parkinson’s) ಖಾಯಿಲೆಯಿಂದನೂ ಪುಟಿನ್‌ ಬಳಲುತ್ತಿದ್ದಾರೆ. ಈ ವಿಚಾರ ಖುದ್ದು ಕ್ರೆಮ್ಲಿನ್‌ನಿಂದ ಲೀಕ್‌ ಆದ ಇಮೇಲ್‌ನಿಂದ ತಿಳಿದು ಬಂದಿದೆ ಅಂತ ಸೊಲೊವಿ ಹೇಳಿದ್ದಾರೆ. ಇನ್ನೊಂದ್‌ ಕಡೆ ಯುಕ್ರೇನ್‌ ಮೇಲೆ ಮತ್ತೆ ತನ್ನ ದಾಳಿಯನ್ನ ತೀವ್ರಗೊಳಿಸಿರೊ ರಷ್ಯಾ 120 ಕ್ಷಿಪಣಿ ದಾಳಿಯನ್ನ ಮಾಡಿದೆ. ಕ್ಷಿಪಣಿ ದಾಳಿಯ ದೃಶ್ಯಗಳು ವೈರಲ್‌ ಆಗಿವೆ.

-masthmagaa.com

Contact Us for Advertisement

Leave a Reply