ಫ್ರಾನ್ಸ್‌, ಅಮೆರಿಕ, ಜರ್ಮನಿ ರಾಯಭಾರಿಗಳಿಗೆ ನೈಜರ್‌ ತೊರೆಯಿರಿ ಎಂದ ಅಲ್ಲಿನ ಸೇನೆ! ಯಾಕೆ?

masthmagaa.com:

ನೈಜರ್‌ ಆಡಳಿತ ವಹಿಸಿಕೊಂಡಿರುವ ಅಲ್ಲಿನ ಸೇನೆ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳ ನಡುವಿನ ಉದ್ವಿಗ್ನತೆ ಕಂಟಿನ್ಯೂ ಆಗಿದೆ. ಈ ಹಿನ್ನಲೆಯಲ್ಲಿ ನೈಜರ್‌ನಲ್ಲಿರುವ ಫ್ರಾನ್ಸ್‌, ಅಮೆರಿಕ, ಜರ್ಮನಿ ಹಾಗೂ ನೈಜೀರಿಯಾ ರಾಯಭಾರಿಗಳನ್ನ 48 ಗಂಟೆಯ ಒಳಗೆ ನೈಜರ್‌ ತೊರೆಯುವಂತೆ ಅಲ್ಲಿನ ಸೇನೆ ಆದೇಶಿಸಿದೆ. ಅಂದ್ಹಾಗೆ ಕಳೆದ ತಿಂಗಳು ನೈಜರ್‌ನ ಅಧ್ಯಕ್ಷ ಮೊಹಮ್ಮದ್‌ ಬಜೌಮ್‌ರನ್ನ ಬಂಧಿಸಿ ಅಲ್ಲಿನ ಪ್ರೆಸಿಡೆನ್ಶಿಯಲ್‌ ಗಾರ್ಡ್‌ನ ಮುಖ್ಯಸ್ಥ ತಾನೇ ನೈಜರ್‌ ಆಡಳಿತ ನಡೆಸೋದಾಗಿ ಘೋಷಿಸಿಕೊಂಡಿದ್ದರು. ಆದ್ರೆ ಇದನ್ನ ಖಂಡಿಸಿರುವ ಪಶ್ಚಿಮ ಆಫ್ರಿಕಾ ರಾಷ್ಟ್ರಗಳ ಒಕ್ಕೂಟ ECOWAS, ನೈಜರ್‌ ಸರ್ಕಾರವನ್ನ ಪುನಃ ಸ್ಥಾಪನೆ ಮಾಡದೇ ಹೋದರೆ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲಾಗುವುದು ಅಂತ ವಾರ್ನ್‌ ಮಾಡಿದೆ.

-masthmagaa.com

Contact Us for Advertisement

Leave a Reply