ಕ್ರಿಕಿಟ್‌ ವಿಶ್ವಕಪ್‌: ಪಾಕಿಸ್ತಾನ ಟೀಮ್‌ಗೆ ಇನ್ನೂ ಸಿಕ್ಕಿಲ್ಲ ಭಾರತದ ವೀಸಾ

masthmagaa.com:

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ಕ್ರಿಕೆಟ್‌ ತಂಡಗಳು ಭಾರತಕ್ಕೆ ಬರಲು ರೆಡಿಯಾಗಿವೆ. ಅದ್ರೆ ಪಕ್ಕದ ಪಾಕಿಸ್ತಾನಕ್ಕೆ ಭಾರತ ಇನ್ನೂ ವೀಸಾ ಕೊಟ್ಟಿಲ್ಲ ಅಂತ ತಿಳಿದು ಬಂದಿದೆ. ಈಗಾಗಲೇ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 10 ತಂಡಗಳ ಪೈಕಿ 9 ತಂಡಗಳಿಗೆ ವೀಸಾವನ್ನು ನೀಡಲಾಗಿದೆ. ಪಾಕಿಸ್ತಾನಕ್ಕೆ ಮಾತ್ರ ಇನ್ನೂ ವೀಸಾ ಸಿಕ್ಕಿಲ್ಲ. ವೀಸಾ ವಿಳಂಬ ಆ ತಂಡದ ಸಿದ್ಧತೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ವಾರದ ಹಿಂದೆಯೇ ವೀಸಾಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಇದಕ್ಕೆ ಭಾರತ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಇನ್ನು ವೀಸಾ ಸಿಗದ ಕಾರಣ ಪಾಕಿಸ್ತಾನ ಕ್ರಿಕೆಟ್ ತಂಡ ಲಾಹೋರ್‌ನಲ್ಲಿ ಉಳಿದುಕೊಂಡಿದ್ದು, ಸೆಪ್ಟೆಂಬರ್ 27 ರಂದು ದುಬೈಗೆ ತೆರಳಲಿದೆ. ಅಲ್ಲಿಂದ ಸೆಪ್ಟೆಂಬರ್ 29ರಂದು ಹೈದರಾಬಾದ್‌ಗೆ ಬರಲಿದೆ ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply