ಶುಕ್ರಗ್ರಹದಲ್ಲಿ ಜೀವಿಗಳು ಇವೆಯೋ.. ಇಲ್ವೋ..?

masthmagaa.com:

ಶುಕ್ರಗ್ರಹದಲ್ಲಿ ಜೀವದ ಸೆಲೆ ಇರಬಹುದು ಅಂತ ಈವರೆಗೆ ಚರ್ಚೆಯಾಗುತ್ತಲೇ ಇತ್ತು. ಆದ್ರೀಗ ಈ ಬಗ್ಗೆ ಅಧ್ಯಯನ ನಡೆಸಿರೋ ತಂಡವೊಂದು ಶುಕ್ರ ಗ್ರಹದಲ್ಲಿ ಸಲ್ಫ್ಯೂರಿಕ್ ಆ್ಯಸಿಡ್​​ನಿಂದಲೇ ತುಂಬಿದ ಮೋಡಗಳಿವೆ. ಹೀಗಾಗಿ ನಮಗೆ ಗೊತ್ತಿರುವಂತಹ ಯಾವುದೇ ಜೀವಿಗಳು ಶುಕ್ರ ಗ್ರಹದಲ್ಲಿ ಇಲ್ಲ ಅಂತ ಹೇಳಿದೆ. ಅಂದ್ರೆ ಜೀವಿಗಳೇ ಇಲ್ಲ ಅಂತ ಕೂಡ ಈ ತಂಡ ಹೇಳಿಲ್ಲ.. ನಮಗೆ ಗೊತ್ತಿರುವ ಅಂದ್ರೆ ಆಕ್ಸಿಜನ್ ಉಸಿರಾಡುವ ನಮ್ಮಂತ ಜೀವಿಗಳು ಇರೋಕೆ ಸಾಧ್ಯವಿಲ್ಲ ಅಂತ ಹೇಳಿದೆ. 2020ರ ಅಧ್ಯಯನವೊಂದ್ರ ಪ್ರಕಾರ ಶುಕ್ರ ಗ್ರಹದ ಮೋಡಗಳಲ್ಲಿ ಫಾಸ್ಪೀನ್​ ಗ್ಯಾಸ್ ಪತ್ತೆಯಾಗಿತ್ತು. ಸಾಮಾನ್ಯವಾಗಿ ಭೂಮಿ ಮೇಲೆ ಬ್ಯಾಕ್ಟೀರಿಯಾಗಳು ಈ ಗ್ಯಾಸ್ ಬಿಡುಗಡೆ ಮಾಡುತ್ತವೆ. ಇದ್ರಿಂದ ಪ್ರೇರೇಪಿತರಾದ ಕೆನಡಾದ ಕ್ವೀನ್ ಯುನಿವರ್ಸಿಟಿ, ಶಕ್ರಗ್ರಹದ ವಾತಾವರಣದಲ್ಲಿ ಜೀವದ ಸೆಲೆ ಇದ್ಯಾ ಅನ್ನೋ ಬಗ್ಗೆ ಅಧ್ಯಯನ ನಡೆಸಿತ್ತು. ಆದ್ರೆ ಈವರೆಗೆ ನಡೆದ ಅಧ್ಯಯನದಲ್ಲಿ ಅಲ್ಲಿ ಜೀವಿಗಳಿವೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply