₹2000‌ ನೋಟು ಎಕ್ಸ್‌ಚೇಂಜ್‌ಗೆ 4 ತಿಂಗಳು ಸಮಯವಿದೆ, ಜನರು ಆತಂಕ ಪಡಬೇಕಿಲ್ಲ: RBI ಗವರ್ನರ್‌

masthmagaa.com:

ಎರಡು ದಿನಗಳ ಹಿಂದೆ 2 ಸಾವಿರ ಮುಖಬೆಲೆಯ ನೋಟನ್ನ ಚಲಾವಣೆಯಿಂದ ವಾಪಾಸ್‌ ಪಡೆಯಲಾಗಿದೆ ಅಂತ ಆರ್‌ಬಿಐ ಅನೌನ್ಸ್‌ ಮಾಡಿತ್ತು. ಇದ್ರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಬ್ಯಾಂಕ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಈ ಹಿನ್ನೆಲೆ RBI ಗವರ್ನರ್‌ ಶಕ್ತಿಕಾಂತ್‌ ದಾಸ್‌ ಮಾತಾಡಿ, 2 ಸಾವಿರ ಮುಖಬೆಲೆಯ ನೋಟುಗಳನ್ನ ಎಕ್ಸ್‌ಚೇಂಜ್‌ ಮಾಡಲು 4 ತಿಂಗಳು ಸಮಯವಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಗ್ತಿದೆ ಅಷ್ಟೆ. ಆದರೆ ಕಾನೂನು ಬದ್ಧವಾಗಿ ಮುಂದುವರಿಯುತ್ತವೆ. ಗಾಬರಿ ಅಥವಾ ಆತಂಕ ಪಡುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ. ಜೊತೆಗೆ 2 ಸಾವಿರ ರೂಪಾಯಿ ನೋಟುಗಳನ್ನು ಆರಂಭಿಸಿದ ಉದ್ದೇಶ ಈಡೇರಿದೆ. ಅಲ್ದೆ ಸಾಕಷ್ಟು ಇತರ ನೋಟುಗಳು ಚಲಾವಣೆಯಲ್ಲಿವೆ ಹೀಗಾಗಿ ವಾಪಾಸ್‌ ತಗೆದುಕೊಳ್ಳಲಾಗಿದೆ. ಇನ್ನು ನೋಟ್‌ ಎಕ್ಸ್‌ಚೇಂಜ್‌ ಪ್ರಕ್ರಿಯೆಯನ್ನ ಜನರು ಗಂಭೀರವಾಗಿ ತೆಗೆದುಕೊಳ್ಳಲಿ ಅನ್ನೊ ಕಾರಣಕ್ಕೆ ಸೆಪ್ಟೆಂಬರ್‌ 30ರವರೆಗೆ ಸಮಯ ನೀಡಲಾಗಿದೆ. ಅಂದ್ಹಾಗೆ ನೋಟುಗಳ ವಿನಿಮಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ ಅಂತ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ. ಇತ್ತ 2016ರಲ್ಲಿ ಪರಿಚಯಿಸಲಾಗಿದ್ದ 2 ಸಾವಿರ ನೋಟುಗಳ ಚಲಾವಣೆಯನ್ನ ವಾಪಸ್‌ ತೆಗೆದುಕೊಂಡಿರುವ ಕ್ರಮವನ್ನ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಮೂರ್ಖತನ ಅಂತ ಕರೆದಿದ್ದಾರೆ. ಈ 2 ಸಾವಿರ ನೋಟುಗಳು ಕೇವಲ ಕಪ್ಪು ಹಣ ಹೊಂದಿರುವವರಿಗೆ ಮಾತ್ರ ಸುಲಭವಾಗಿ ಹಣ ಕೂಡಿಡಲು ಸಹಾಯ ಮಾಡಿದೆ. ಇದ್ರಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಾಗಿರಲಿಲ್ಲ. ಇದೀಗ ಕಪ್ಪು ಹಣವನ್ನ ವಿನಿಮಯ ಮಾಡಿಕೊಳ್ಳಲು ಸುಲಭವಾದ ಹಾದಿ ಮಾಡಿಕೊಟ್ಟಂತಾಗಿದೆ ಅಂತ ಆರೋಪಿಸಿದ್ದಾರೆ. ಇನ್ನು 2 ಸಾವಿರ ನೋಟುಗಳನ್ನ ಬದಲಾಯಿಸಲು ಯಾವುದೇ ಗುರುತಿನ ಚೀಟಿ ಅಗತ್ಯವಿಲ್ಲ ಅಂತ ಬ್ಯಾಂಕ್‌ಗಳು ಸ್ಪಷ್ಟಪಡಿಸಿವೆ. ಸೋ ಕಪ್ಪು ಹಣವನ್ನ ಬಹಿರಂಗಪಡಿಸಲು 2 ಸಾವಿರ ನೋಟುಗಳನ್ನ ಹಿಂದೆ ತೆಗೆದುಕೊಳ್ಳಲಾಗ್ತಿದೆ ಅನ್ನೊ ಬಿಜೆಪಿ ವಾದ ನೆಲಸಮವಾಗಿದೆ ಅಂತ ಟೀಕಿಸಿದ್ದಾರೆ.

-masthmagaa.com

Contact Us for Advertisement

Leave a Reply