ಹೈದರಾಬಾದ್‌: ಪ್ರಚಾರದ ವೇಳೆ ಪೊಲೀಸ್‌ಗೆ ಬೆದರಿಕೆ ಹಾಕಿದ AIMIMನ ನಾಯಕ!

masthmagaa.com:

ಹೈದರಾಬಾದ್‌ನಲ್ಲಿ ಪ್ರಚಾರ ಮಾಡ್ತಿರೋ ವೇಳೆ AIMIM ನಾಯಕ ಹಾಗೂ ಅಸಾದುದ್ದೀನ್‌ ಓವೈಸಿ ಸಹೋದರ ಅಕ್ಬರುದ್ದೀನ್‌ ಓವೈಸಿ ಪೊಲೀಸ್‌ ಅಧಿಕಾರಿಗೆ ಓಪನ್‌ ಆಗಿ ಬೆದರಿಕೆ ಹಾಕಿರೋ ಘಟನೆ ನಡೆದಿದೆ. ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡ್ತಿದ್ದ ವೇಳೆ ಅಕ್ಬರುದ್ದೀನ್‌ ನೀತಿ ಸಂಹಿತೆ ಉಲ್ಲಂಘಿಸಿ, ಭಾಷಣ ಕಂಟಿನ್ಯೂ ಮಾಡಿದ್ದಾರೆ. ಹೀಗಾಗಿ ಅಲ್ಲಿದ್ದ ಪೋಲಿಸ್‌ ಒಬ್ರು ಭಾಷಣ ಸ್ಟಾಪ್‌ ಮಾಡಿ ಅಂತ ಹೇಳಿದ್ದಾರೆ. ಈ ವೇಳೆ ಭಾಷಣ ಮುಂದುವರಿಸಿರೋ ಅಕ್ಬರುದ್ದೀನ್‌ ʻಚಾಕು ಮತ್ತು ಬುಲೆಟ್‌ಗಳನ್ನ ಫೇಸ್‌ ಮಾಡಿದ ಮೇಲೆ ನಾನು ವೀಕ್‌ ಆಗ್ಬಿಟ್ಟೆ ಅನ್ಕೊಂಡ್ರಾ? ನನ್ನ ಗುಂಡಿಗೆ ಇನ್ನೂ ಗಟ್ಟಿ ಇದೆ. ಇನ್ನೂ ಐದು ನಿಮಿಷ ಬಾಕಿ ಇದೆ. ಉಳಿದ ಐದು ನಿಮಿಷದವರೆಗೆ ಭಾಷಣ ಮಾಡ್ತೀನಿ, ನನ್ನನ್ನ ನಿಲ್ಲಿಸೋಕೆ ಯಾರಿಂದ್ಲೂ ಸಾಧ್ಯ ಇಲ್ಲ. ನಾನೊಂದು ಸಿಗ್ನಲ್‌ ಕೊಟ್ರೆ ಸಾಕು, ನೀನು ಓಡಿ ಹೋಗ್ಬೇಕಾಗುತ್ತೆ. ನಾನು ಇವ್ರನ್ನ ಓಡಿಸ್ಲಾ? ಅಂತ ಬೆದರಿಕೆ ಹಾಕಿದ್ದಾರೆ. ಅಂದ್ಹಾಗೆ ತೆಲಂಗಾಣದಲ್ಲಿ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಚಾಲ್ತಿಯಲ್ಲಿದೆ. ಈ ಅಕ್ಬರುದ್ದೀನ್ ಹೈದರಾಬಾದ್‌ನ ಚಂದ್ರಾಯನಗುಟ್ಟಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಸ್ಥಾನ AIMIMನ ಭದ್ರಕೋಟೆಯಾಗಿದ್ದು, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಗೆದ್ದಿದೆ.

-masthmagaa.com

Contact Us for Advertisement

Leave a Reply