ಬಾಬರ್‌, ಔರಂಗಜೇಬ್‌ನಿಂದಲೇ ಸನಾತನ ಧರ್ಮವನ್ನ ಅಲ್ಲಾಡಿಸೋಕೆ ಆಗ್ಲಿಲ್ಲ…ಇನ್ನು ಇವ್ರೆಲ್ಲಾ ಯಾವ ಲೆಕ್ಕ: ಯೋಗಿ ಆದಿತ್ಯನಾಥ

masthmagaa.com:

ಸನಾತನ ಧರ್ಮವನ್ನ ನಿರ್ಮೂಲನೆ ಮಾಡ್ಬೇಕು ಅಂತ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ್ದ ಹೇಳಿಕೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನೇರವಾಗಿ ಉದಯನಿಧಿಯವರ ಹೆಸರನ್ನ ತೆಗೆದುಕೊಳ್ಳದೆ ಮಾತಾಡಿರುವ ಯೋಗಿ, ರಾವಣನ ದುರಹಂಕಾರ ಸನಾತನ ಧರ್ಮವನ್ನ ಅಳಿಸೋಕೆ ಆಗ್ಲಿಲ್ಲ. ಕಂಸನ ಘರ್ಜನೆ ಧರ್ಮವನ್ನ ಅಲುಗಾಡಿಸೋಕೆ ಆಗ್ಲಿಲ್ಲ. ಬಾಬರ್‌ ಮತ್ತು ಔರಂಗಜೇಬನ ದೌರ್ಜನ್ಯಗಳೂ ಸನಾತನ ಧರ್ಮವನ್ನ ಏನು ಮಾಡಲು ಆಗ್ಲಿಲ್ಲ. ಈಗ ಈ ಅಧಿಕಾರ ದಾಹ ಇರುವ ಕ್ಷುಲ್ಲಕ ಪರಾವಲಂಬಿ ಜೀವಿಗಳಿಂದ ಅಳಿಸಿ ಹಾಕೋಕೆ ಸಾಧ್ಯನಾ? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ದೆ ದೇವರನ್ನು ಅಳಿಸಿಹಾಕಲು ಹೊರಟವರು ಖುದ್ದು ನಾಶವಾಗಿದ್ದಾರೆ. 500 ವರ್ಷಗಳ ಹಿಂದೆಯೂ ಸನಾತನ ಧರ್ಮವನ್ನ ಅವಮಾನಿಸಲಾಗಿತ್ತು. ಆದರೆ ಇಂದು ಅಯೋಧ್ಯೆಯಲ್ಲಿ ರಾಮನ ದೇವಾಲಯ ನಿರ್ಮಾಣವಾಗುತ್ತಿದೆ. ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ. ದೇಶದ ಪ್ರಗತಿಯಲ್ಲಿ ಅಡ್ಡಗಾಲು ಹಾಕುತ್ತಿವೆ. ಆದರೆ ಅವುಗಳ ಪ್ರಯತ್ನ ಈಡೇರಲ್ಲ ಅಂತ ಕಿಡಿಕಾರಿದ್ದಾರೆ.

ಇನ್ನೊಂದ್‌ ಕಡೆ ಸಿಎಂ ಸಿದ್ದರಾಮಯ್ಯನವರು ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ನೀಡಿರೋ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಒಮ್ಮೆ, ನಾನು ಕೇರಳದ ದೇವಸ್ಥಾನಕ್ಕೆ ಹೋದಾಗ, ಅವರು ನನ್ನ ಅಂಗಿಯನ್ನು ತೆಗೆದು ಒಳಗೆ ಪ್ರವೇಶಿಸುವಂತೆ ಹೇಳಿದರು. ಆದರೆ ನಾನು ದೇವಸ್ಥಾನ ಪ್ರವೇಶಿಸಲು ನಿರಾಕರಿಸಿ, ಹೊರಗಿನಿಂದಲೇ ಪ್ರಾರ್ಥನೆ ಮಾಡುತ್ತೇನೆ ಅಂತ ಸಿಬ್ಬಂದಿಗೆ ಹೇಳಿದೆ. ಅಲ್ಲದೆ ಅಲ್ಲಿನ ಸಿಬ್ಬಂದಿ ಕೆಲವರನ್ನು ಬಿಟ್ಟು ನನ್ನ ಜೊತೆಯಿದ್ದ ಹಲವರಿಗೆ ಅಂಗಿಯನ್ನು ಕಳಚಿ ಎಂದರು. ಆದರೆ ಇದು ಅಮಾನವೀಯ ಪದ್ಧತಿ. ದೇವರ ಮುಂದೆ ಎಲ್ಲರೂ ಸಮಾನರು ಅಂತ ಹೇಳಿದ್ದಾರೆ.

ಮತ್ತೊಂದು ಕಡೆ ಉದಯನಿಧಿಯವರ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ತಮಿಳುನಾಡು ಸಿಎಂ ವಿರುದ್ಧ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವ್ರು ವಾಗ್ದಾಳಿ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಏನಾದ್ರು ನಿರ್ಮೂಲನೆ ಆಗ್ಬೇಕು ಅನ್ನೋದಾದ್ರೆ ಅದು DMK ಅಂದ್ರೆ D – Dengue, M – Malaria, K – Kosu. ಈ ಮಾರಣಾಂತಿಕ ಖಾಯಿಲೆಗಳನ್ನ ಜನರು DMK ಜೊತೆ ಕನೆಕ್ಟ್‌ ಮಾಡ್ತಾರೆ ಅನ್ನೋದು ನಮಗೆ ಖಚಿತವಾಗಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply