ಸಂಸತ್ ಅಧಿವೇಶನದ ಬಗ್ಗೆ ಸುಪ್ರೀಂಕೋರ್ಟ್​​ ಸಿಜೆ ಹೇಳಿದ್ದೇನು?

masthmagaa.com:

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​​ವಿ ರಮಣ ಇವತ್ತು, ಸಂಸತ್ ಕಲಾಪ ಸರಿಯಾಗಿ ನಡೆಯದೇ ಇದ್ದಿದ್ದಕ್ಕೆ ಕಟುವಾಗಿ ಟೀಕಿಸಿದ್ದಾರೆ. ಸಂಸತ್​ನಲ್ಲಿ ಕಳೆದ ಅಧಿವೇಶನದಲ್ಲಿ ನಡೆದ ಗದ್ದಲಗಳ ಬಗ್ಗೆ ಮಾತನಾಡಲಿಲ್ಲ. ಆದ್ರೆ ಕಾನೂನುಗಳ ಬಗ್ಗೆ ಚರ್ಚೆ ನಡೆಯಬೇಕು ಅಂತ ಹೇಳಿದ್ರು. ಒಂದು ಸಮಯದಲ್ಲಿ ಎರಡೂ ಸದನಗಳು ವಕೀಲರಿಂದ ತುಂಬಿ ಹೋಗಿತ್ತು. ಅಂದ್ರೆ ವಕೀಲರೇ ಜಾಸ್ತಿ ಇರ್ತಿದ್ರು. ಆದ್ರೀಗ ಕಾನೂನುಗಳಲ್ಲಿ ಸ್ಪಷ್ಟತೆ ಇಲ್ಲ. ಈ ಕಾನೂನುಗಳ ಉದ್ದೇಶ ಏನು ಅನ್ನೋದೇ ನಮಗೆ ಗೊತ್ತಿಲ್ಲ. ಇದು ಸಾರ್ವಜನಿಕರಿಗೆ ಆಗ್ತಿರೋ ನಷ್ಟವಾಗಿದೆ. ಸದನದಲ್ಲಿ ಬುದ್ಧಿಜೀವಿಗಳು ಮತ್ತು ವಕೀಲರು ಇಲ್ಲದೇ ಇರೋ ಸಮಯದಲ್ಲಿ ಹೀಗೆಲ್ಲಾ ಆಗ್ತಿದೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಈ ಹಿಂದೆ ಸ್ವಾತಂತ್ರ್ಯ ಹೋರಾಟಗಾರರಲ್ಲೂ ವಕೀಲರು ಹೆಚ್ಚಾಗಿ ನೋಡೋಕೆ ಸಿಗ್ತಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಮೊದಲ ಸದಸ್ಯರು ಕೂಡ ಹೆಚ್ಚಾಗಿ ವಕೀಲರೇ ಆಗಿದ್ರು ಅಂತ ಹೇಳಿದ್ದಾರೆ. ಜೊತೆಗೆ ಈಗಲೂ ಕಾನೂನು ಕ್ಷೇತ್ರದಲ್ಲಿರೋರು ಸಾರ್ವಜನಿಕ ಸೇವೆಗೆ ಸಮಯ ಮೀಸಲಿಡಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply