ಹೆಚ್ಚುತ್ತಿರೋ ನಿಗೂಢ ನ್ಯುಮೋನಿಯಾ: ಮತ್ತೇ ಹೊಸ ಸೋಂಕಿನ ಲಕ್ಷಣವಿಲ್ಲ ಎಂದ ಚೀನಾ!

masthmagaa.com:

ಚೀನಾ ಗಡಿ ದಾಟಿ ಡೆನ್ಮಾರ್ಕ್‌, ಅಮೆರಿಕ, ನೆದರ್‌ಲ್ಯಾಂಡ್ಸ್‌, ಸ್ವೀಡನ್‌ನಲ್ಲಿ ಚೀನಾ ನ್ಯುಮೋನಿಯಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಆದ್ರೆ ಇತ್ತ ಚೀನಾ ಮಾತ್ರ ಏನೂ ಆಗಿಲ್ಲ ಅನ್ನೋ ರೀತಿಯಲ್ಲಿ ವರ್ತಿಸೋದನ್ನ ಕಂಟಿನ್ಯೂ ಮಾಡ್ತಿದೆ. ಚೀನಾದಲ್ಲಿ ಈ ನಿಗೂಢ ನ್ಯುಮೋನಿಯಾ ಹೆಚ್ಚಾಗ್ತಿದ್ರೂ, ಇವೆಲ್ಲಾ ಗೊತ್ತಿರೋ ವೈರಸ್‌ನಿಂದ ಆಗ್ತಿರೋದು. ಯಾವ್ದೇ ರೀತಿಯ ಹೊಸ ಸಾಂಕ್ರಮಿಕ ಖಾಯಿಲೆ ಪತ್ತೆಯಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ, ಚೀನಾ ಬಳಿ ನಿಗೂಢ ನ್ಯುಮೋನಿಯಾದ ರಿಪೋರ್ಟ್‌ ಕೊಡಿ ಅಂತ ಇತ್ತೀಚೆಗಷ್ಟೇ ಕೇಳಿಕೊಂಡಿತ್ತು. ಹೀಗಾಗಿ ಇದು ಕೋವಿಡ್‌ ತರಾನೇ ಆಗ್ಬೋದು ಅಂತ ಸುದ್ದಿಯಾಗ್ತಿದೆ ಅಷ್ಟೇ. ಈ ಸಾಮಾನ್ಯ ಸೋಂಕು ತಡೆಯೋಕೆ ಚೀನಾ ಅಧಿಕಾರಿಗಳು ಹೆಚ್ಚೆಚ್ಚು ಪೀಡಿಯಾಟ್ರಿಕ್‌ ಔಟ್‌ ಪೇಷಂಟ್‌ ಕ್ಲಿನಿಕ್‌ ಓಪನ್‌ ಮಾಡ್ತಿದಾರೆ. ಮಕ್ಕಳು ಮತ್ತು ವಯಸ್ಸಾದವ್ರು ವ್ಯಾಕ್ಸಿನ್‌ ಪಡೆಯೋ ಬಗ್ಗೆ ಗಮನ ಹರಿಸ್ತೀವಿ. ಜೊತೆಗೆ ಮಾಸ್ಕ್‌ ಹಾಕೋಕೆ ಮತ್ತು ಕೈ ತೊಳೆಯೋಕೆ ಜನರಿಗೆ ಪ್ರೋತ್ಸಾಹಿಸ್ತೀವಿ ಅಂತ ಚೀನಾದ ನ್ಯಾಷನಲ್‌ ಹೆಲ್ತ್‌ ಕಮಿಷನ್‌ನ ಅಧಿಕಾರಿಯೊಬ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply