ಭಾರತ- ಚೀನಾ ಜಂಟಿಯಾಗಿ ಜಗತ್ತಿಗೆ ಕೊಡುಗೆ ನೀಡ್ಬೇಕು: ಚೀನಾ

masthmagaa.com:

SCO ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ದೆಹಲಿಯಲ್ಲಿ ನಡೆದಿದ್ದು, ಈ ವೇಳೆ ಗಡಿಯಲ್ಲಿ ಪದೇಪದೆ ಕಿರಿಕ್‌ ಮಾಡ್ತಿರುವ ಚೀನಾಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವ್ರು ಖಡಕ್‌ ಸಂದೇಶ ನೀಡಿದ್ರು. ಇದೀಗ ಇದಕ್ಕೆ ಚೀನಾ ಪ್ರತಿಕ್ರಿಯಿಸಿದೆ. ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಗಡಿ ಸಮಸ್ಯೆಯನ್ನ ಯಾವ ಪೊಸಿಷನ್‌ನಲ್ಲಿ ಇಡ್ಬೇಕು ಅನ್ನೋದ್ರ ಕುರಿತು ದೂರದೃಷ್ಟಿ ಹೊಂದುವುದು ಮುಖ್ಯವಾಗಿದೆ. ಸದ್ಯಕ್ಕೆ ಗಡಿಯಲ್ಲಿರುವ ಪರಿಸ್ಥಿತಿಯನ್ನ ಸಾಮಾನ್ಯ ರೀತಿಯಲ್ಲಿ ಮ್ಯಾನೇಜ್‌ ಮಾಡುವ ಮೂಲಕ ಬದಲಾವಣೆಗೆ ಉತ್ತೇಜನ ನೀಡ್ಬೇಕು ಅಂತ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ದೆ ಚೀನಾ ಮತ್ತು ಭಾರತ ಭಿನ್ನಭಿಪ್ರಾಯಗಳಿಗಿಂತ ಹೆಚ್ಚು ಕಾಮನ್ ಇಂಟರೆಸ್ಟ್‌ಗಳನ್ನ ಹೊಂದಿವೆ. ಈ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತು ಪರಸ್ಪರ ಅಭಿವೃದ್ಧಿಯನ್ನ ಸ್ಟ್ರಾಟಜಿಕ್‌ ದೃಷ್ಟಿಯಿಂದ ನೋಡ್ಬೇಕು. ಜೊತೆಯಾಗಿ ಜಗತ್ತಿಗೆ ಕೊಡುಗೆಯನ್ನ ನೀಡ್ಬೇಕು ಅಂತ ಚೀನಾ ಹೇಳಿದೆ. ಅಂದ್ಹಾಗೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ವೃಧ್ದಿ, ಗಡಿಯಲ್ಲಿ ಶಾಂತಿ ಸುಧಾರಣೆಯಿಂದ ಮಾತ್ರ ಸಾಧ್ಯ. ಇಲ್ಲ ಅಂದ್ರೆ ಅದು ಸರಿ ಹೋಗೋದಿಲ್ಲ. ಇಬ್ರೂ ಈ ಬಗ್ಗೆ ಕೇರ್‌ ಮಾಡಬೇಕು ಅಂತ ಭಾರತೀಯ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ರು.

-masthmagaa.com

Contact Us for Advertisement

Leave a Reply