ಮಿಸೈಲ್‌ ಉಡಾವಣೆ ಮಾಡಿ ಶತ್ರು ರಾಷ್ಟ್ರಗಳಿಗೆ ಸೆಡ್ಡು ಹೊಡೆದ ಕಿಮ್ಮಣ್ಣ!

masthmagaa.com:

ನಾರ್ತ್‌ ಕೊರಿಯಾ ಮತ್ತೊಮ್ಮೆ ಭಯಾನಕ ಕ್ಷಿಪಣಿ ಪರೀಕ್ಷೆ ಮಾಡಿದೆ. ಶಾರ್ಟ್‌ ರೆಂಜ್‌ ಮಲ್ಟಿಪಲ್ ಬ್ಯಾಲಸ್ಟಿಕ್‌ ಮಿಸೈಲ್‌ಗಳನ್ನ ಉಡಾಯಿಸೊ ಮೂಲಕ ಶತ್ರುರಾಷ್ಟ್ರಗಳ ವಿರುದ್ದ ಶಕ್ತಿ ಪ್ರದರ್ಶಿಸಿದೆ. ಅಮೆರಿಕದ ಸೆಕ್ರೆಟ್ರಿ ಆಫ್‌ ಸ್ಟೇಟ್‌ ಆಂಟೋನಿ ಬ್ಲಿಂಕನ್‌ ದಕ್ಷಿಣ ಕೊರಿಯಾಗೆ ಭೇಟಿ ನೀಡಿರೋ ಹೊತ್ತಲ್ಲೇ ಈ ಬೆಳವಣಿಗೆಯಾಗಿದೆ. ಇತ್ತೀಚಿಗಷ್ಟೇ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾಗಳು ಜಂಟಿ ಸೇನಾ ಸಮರಾಭ್ಯಾಸ ನಡೆಸಿದ್ವು. ಅಲ್ದೇ ಕಳೆದ ಬಾರಿಗಿಂತ ಎರಡು ಪಟ್ಟು ಸೈನ್ಯದೊಂದಿಗೆ ಈ ಸಮರಾಭ್ಯಾಸ ನಡೆದಿತ್ತು. ಇದಕ್ಕೆ ಸಿಡಿಮಿಡಿಗೊಂಡಿದ್ದ ಕಿಮ್‌ ಜಾಂಗ್‌ ಉನ್‌ ತನ್ನ ಸೇನೆಗೆ ಯುದ್ದಕ್ಕೆ ಸಜ್ಜಾಗುವಂತೆ ಕರೆ ನೀಡಿದ್ರು. ಈಗ ಮಲ್ಟಿಪಲ್‌ ಮಿಸೈಲ್‌ ಲಾಂಚ್‌ ಮಾಡಿ ಅಮೆರಿಕಗೆ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply