ಹೊಸ ಟೆಕ್ನಾಲಜಿಯ ಮಿಸೈಲ್‌ ಪರೀಕ್ಷೆ ಮಾಡಿದ ಕಿಮ್ಮಣ್ಣ!

masthmagaa.com:

ಉತ್ತರ ಕೊರಿಯಾ ಮತ್ತೊಂದು ಮಿಸೈಲ್‌ ಪರೀಕ್ಷೆ ನಡೆಸಿದೆ. ಈ ಭಾರಿ ಅತ್ಯಾಧುನಿಕ ಹೈಪರ್ಸಾನಿಕ್‌ ಬ್ಯಾಲಸ್ಟಿಕ್‌ ಮಿಸೈಲನ್ನ ಪರೀಕ್ಷೆ ಮಾಡಿದ್ರೆ. ಅದ್ರಲ್ಲೂ ಇದೇ ಮೊದಲ ಬಾರಿಗೆ ಕಿಮ್‌ ಜಾಂಗ್‌ ಉನ್‌ ಆರ್ಮಿ, ʻಸಾಲಿಡ್‌ ಫುಯೆಲ್ ಅಥ್ವಾ ಘನ ಇಂಧನ ಬಳಸೋ ಮಿಸೈಲನ್ನ ಲಾಂಚ್‌ ಮಾಡಿದೆ. ಈ ಬೆನ್ನಲ್ಲೇ ಅಪರೂಪಕ್ಕೆ ಸಮಾಧಾನವಾಗಿ ಹೇಳಿಕೆ ನೀಡಿರೋ ಉತ್ತರ ಕೊರಿಯಾ, ʻನಾವು ಯಾವುದೇ ನೆರೆಯ ರಾಷ್ಟ್ರದ ಸೆಕ್ಯುರಿಟಿಗೆ ತೊಂದರೆ ಕೊಟ್ಟಿಲ್ಲ. ಈ ಮಿಸೈಲ್‌ ಪರೀಕ್ಷೆಗೂ ಈ ಪ್ರದೇಶದ ಉದ್ವಿಗ್ನತೆಗೂ ಸಂಬಂಧ ಇಲ್ಲʼ ಅಂದಿದೆ. ಅಂದ್ರೆ ಇರು ಪ್ಯೂರ್‌ ಸೈಂಟಿಫಿಕ್‌ ಎಕ್ಸ್‌ಪರಿಮೆಂಟ್‌ ಅನ್ನೋ ರೀತಿ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply