ನಾರ್ವೇಯಲ್ಲಿ ತಲೆ ಎತ್ತಿದ ವಿಶ್ವದ ಅತಿದೊಡ್ಡ ತೇಲುವ ವಿಂಡ್‌ ಪಾರ್ಕ್‌!

masthmagaa.com:

ವಿಶ್ವದ ಅತಿದೊಡ್ಡ ತೇಲುವ ವಿಂಡ್‌ ಪಾರ್ಕ್‌ನ್ನ ನಾರ್ಥ್ ಸೀಯಲ್ಲಿ ನಾರ್ವೇ ಉದ್ಘಾಟಿಸಿದೆ. ಇದಕ್ಕೆ ʻಹೈವಿಂಡ್‌ ಟ್ಯಾಂಪೆನ್‌ ಫೀಲ್ಡ್‌ʼ ಅಂತ ಹೆಸರಿಡಲಾಗಿದ್ದು, 11 ಟರ್ಬೈನ್‌ ಅಂದ್ರೆ ವಿಂಡ್‌ ಫ್ಯಾನ್‌ಗಳನ್ನ ಒಳಗೊಂಡಿದೆ. ಪ್ರತಿಯೊಂದು ಟರ್ಬೈನ್‌ಗಳು 8.6 ಮೆಗಾವ್ಯಾಟ್‌ ಪವರ್‌ನ್ನ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ ಅಂತ ಹೇಳಲಾಗಿದೆ. ಇನ್ನು ಈ ಫೀಲ್ಡ್‌ ಕಳೆದ ವರ್ಷದ ಅಂತ್ಯದಲ್ಲೇ ತನ್ನ ಕೆಲಸ ಆರಂಭಿಸಿದೆ. ಆದ್ರೆ ಇದೀಗ ಅಲ್ಲಿನ ಕ್ರೌನ್‌ ಪ್ರಿನ್ಸ್‌ ಹಾಕೊನ್‌ ಹಾಗೂ ಪ್ರಧಾನಿ ಜೋನಸ್‌ ಗಹ್ರ್ ಸ್ಟೋರ್‌ ಅವ್ರಿಂದ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

-masthmagaa.com

Contact Us for Advertisement

Leave a Reply