ಕಾಂಗ್ರೆಸ್‌ ಬಳಿ ಅದಾನಿ ಗ್ರೂಪ್‌ ಕೇಸ್‌ಗೆ ಸಂಬಂಧಿಸಿದ ಪ್ರೂಫ್‌ ಇದ್ರೆ ಸುಪ್ರೀಂಕೋರ್ಟ್‌ ಹೋಗಲಿ: ಅಮಿತ್‌ ಶಾ

masthmagaa.com:

ಉದ್ಯಮಿ ಗೌತಮ್‌ ಅದಾನಿ ಕೇಸ್‌ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಮಾಡಿರೋ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಮುಚ್ಚಿಡೋಕಾಗ್ಲಿ ಭಯ ಪಡೋಕಾಗ್ಲಿ ಏನು ಇಲ್ಲ… ಕಾಂಗ್ರೆಸ್‌ ಬಳಿ ಸಾಕ್ಷಿ ಇದ್ರೆ ಬೇಕಾದ್ರೆ ಕೋರ್ಟ್‌ಗೆ ಹೋಗಲಿ ಅಂತ ಅಮಿತ್‌ ಶಾ ಹೇಳಿದ್ದಾರೆ. ಪೆಗಾಸಾಸ್‌ ಸ್ಪೈವೇರ್‌ ವಿಚಾರದಲ್ಲೂ ಕಾಂಗ್ರೆಸ್‌ ಹೀಗೆ ಸುಳ್ಳು ಆರೋಪ ಮಾಡಿತ್ತು. ಆಗ್ಲೂ ಸರಿಯಾದ ಫ್ರೂಫ್‌ ಇದ್ರೆ ಕೋರ್ಟ್‌ಗೆ ಹೋಗಿ ಅಂತ ನಾನು ಹೇಳಿದ್ದೆ, ಅವ್ರು ಹೋಗ್ಲಿಲ್ಲ. ಕಾಂಗ್ರೆಸ್‌ಗೆ ಬರಿ ಗಲಾಟೆ ಮಾಡೋದು ಅಷ್ಟೆ ಗೊತ್ತಿರೋದು. ಕೋರ್ಟ್‌ ನಮ್ಮ ಕಂಟ್ರೋಲ್‌ನಲ್ಲಿ ಇಲ್ಲ, ಹಾಗೆಂದ ಮೇಲೆ ಅವರು ಅಲ್ಲಿಗೆ ನ್ಯಾಯಾಂಗದ ಬಳಿ ಹೋಗಲಿ ಅಂತ ಅಮಿತ್‌ ಶಾ ಹೇಳಿದ್ದಾರೆ.) ಇತ್ತ ಲೋಕಸಭಾ ಚುನಾವಣೆಗಳಿಗೆ ಸೆಮಿಫೈನಲ್ ಅಂತಲೇ ಕರೆಯಲಾಗ್ತಿರೋ ಈ ವರ್ಷದ 9 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಗೆಲ್ಲುತ್ತದೆ ಅಂತ ಅಮಿತ್‌ ಶಾ ಹೇಳಿದಾರೆ. ಅಲ್ದೇ ಮಂಡ್ಯದ ರಾಜಕೀಯದ ಬಗ್ಗೆ ಕೂಡ ಮಾತನಾಡಿದ್ದು, ಮಂಡ್ಯ ಜನತೆ ಈಗ ವಂಶ ಪಾರಂಪರ್ಯ ಪಕ್ಷಗಳನ್ನು ಬಿಟ್ಟು ಬಿಜೆಪಿಯ ಅಭಿವೃದ್ಧಿ ರಾಜಕಾರಣವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕಕ್ಕೆ ಶುಭ ಸೂಚನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿರುವ ಹಿನ್ನೆಲೆ ನಮಗೆ ಗೆಲುವು ನಿಶ್ಚಿತ ಅಂತ ಹೇಳಿದ್ದಾರೆ.
ಇತ್ತ ಅದಾನಿ ಗ್ರೂಪ್‌ ಮೇಲೆ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಮಾಡಿರೋ ಆರೋಪದ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಸೆಬಿ ಸುಪ್ರೀಂಕೋರ್ಟ್‌ಗೆ ಹೇಳಿದೆ.

-masthmagaa.com

Contact Us for Advertisement

Leave a Reply