ಟೆನ್ನಿಸ್ ಆಟಗಾರ ನೋವಾಕ್ ಜೊಕೋವಿಚ್​​ ಗಡೀಪಾರು!

masthmagaa.com:

ಟೆನ್ನಿಸ್ ಲೋಕದ ನಂಬರ್ ಒನ್ ಆಟಗಾರ ನೊವಾಕ್ ಜೊಕೋವಿಚ್​ರನ್ನು ಆಸ್ಟ್ರೇಲಿಯಾ ಗಡೀಪಾರು ಮಾಡಿದೆ. 11 ದಿನಗಳ ಕಾಲ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಿದ ಜೊಕೋವಿಚ್ ಕೊನೆಗೂ ಸೋತು ದುಬೈಗೆ ಬಂದಿಳಿದಿದ್ದಾರೆ. ನಿನ್ನೆ ರಾತ್ರಿ 10.51ಕ್ಕೆ ಜೊಕೋವಿಚ್​​​​ರನ್ನು ಹೊತ್ತ ಇಕೆ 409 ಎಮಿರೇಟ್ಸ್​ ವಿಮಾನ ದುಬೈಗೆ ಹೊರಟಿತ್ತು. ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ ಅವರು, ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ನಿರ್ಧಾರದಿಂದ ತುಂಬಾ ಬೇಜಾರಾಗಿದೆ ಅಂದ್ರು. ಅಂದಹಾಗೆ ಇತ್ತೀಚೆಗೆ ಲಸಿಕೆ ಹಾಕಿಸಿಕೊಳ್ಳದ ಜೊಕೋವಿಚ್​​​ಗೆ ವೀಸಾ ನೀಡಿದ್ದ ಆಸ್ಟ್ರೇಲಿಯಾ, ನಂತರ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿತ್ತು. ಜೋಕೋವಿಚ್​​​​ರ ಎಂಟ್ರಿ ವಿಸಾವನ್ನ ಕ್ಯಾನ್ಸಲ್​ ಮಾಡಿತ್ತು. ಅಷ್ಟರಲ್ಲಾಗಲೇ ಮೆಲ್ಬರ್ನ್​ ಏರ್​ಪೋರ್ಟ್ಗೆ ಬಂದಿದ್ದ ಜೋಕೋವಿಚ್​ರನ್ನು ಅಕ್ರಮ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿತ್ತು. ಹೀಗಾಗಿ ಜೊಕೋವಿಚ್ ಆಸ್ಟ್ರೇಲಿಯಾ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ರು. ಸ್ಥಳೀಯ ಕೋರ್ಟ್​​ ಜೊಕೋವಿಚ್ ಪರವಾಗಿ ತೀರ್ಪು ನೀಡಿತ್ತು. ಆದ್ರೆ ಅದನ್ನ ಪ್ರಶ್ನಿಸಿ ಆಸ್ಟ್ರೇಲಿಯಾ ಸರ್ಕಾರ ಫೆಡರಲ್ ಕೋರ್ಟ್​​ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್​, ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು.

-masthmagaa.com

Contact Us for Advertisement

Leave a Reply