ಮಮತಾ ಬ್ಯಾನರ್ಜಿ, ಸೋಷಿಯಲಿಂ ಮದ್ವೆ! ಫುಲ್ ವೈರಲ್

masthmagaa.com:

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಎಂಬ ವಧು ಮತ್ತು ಸೋಷಿಯಲಿಸಂ ಅನ್ನೋ ವರನ ನಡುವೆ ಮದ್ವೆಯಾಗಿದೆ. ಮಮತಾ ಬ್ಯಾರ‍್ಜಿ ಅಂದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಲ್ಲ. ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರೋ ನಾಯಕರೊಬ್ಬರ ಪುತ್ರಿ. ಅಂದ್ಹಾಗೆ ಟಿಎಂಸಿ ಪಕ್ಷ ಕಟ್ಟೋಕು ಮೊದ್ಲು ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷದಲ್ಲಿದ್ರು. ಆಗ ಮಮತಾ ಬ್ಯಾನರ್ಜಿಯಂತಹ ಫೈರ್​ ಬ್ರಾಂಡ್​​​ ನೋಡಿ ತಮ್ಮ ಮಗಳಿಗೆ ಅದೇ ಹೆಸರನ್ನ ಇಟ್ಟಿದ್ದಾರೆ. ಆದ್ರೆ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಬಿಟ್ಟು ಟಿಎಂಸಿ ಪಕ್ಷವನ್ನ ಕಟ್ಟಿ ಈಗ ಸುಮಾರು 22 ವರ್ಷಗಳೇ ಕಳೆದಿದೆ. ಇನ್ನು ಈ ವರನ ಹೆಸರು ಕೂಡ ಸ್ವಲ್ಪ ಸ್ಪೆಷಲ್ ಆಗಿದೆ. ಸೋಷಿಯಲಿಸಂ ಅಂತ.. ಈತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸೇಲಂ ಜಿಲ್ಲಾ ಕಾರ್ಯದರ್ಶಿಯ ಪುತ್ರ. ಈ ಡಿಸ್ಟ್ರಿಕ್ಟ್ ಸೆಕ್ರೆಟರಿಯ ಮತ್ತಿಬ್ಬರು ಮಕ್ಕಳ ಹೆಸರು ಕಮ್ಯೂನಿಸಂ ಮತ್ತು ಲೆನಿನಿಸಂ ಅಂತೆ. ಅಂದ್ಹಾಗೆ ಸೋವಿಯತ್ ಯೂನಿಯನ್ ಪತನವಾಗ್ತಿದ್ದಾಗ ಮಕ್ಕಳಿಗೆ ಈ ಹೆಸರುಗಳನ್ನ ಇಟ್ಟಿದ್ದಂತೆ. ಒಟ್ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಎಡಪಕ್ಷಗಳು ಬದ್ಧವೈರಿಗಳು ಇರಬಹುದು. ಆದ್ರಿಲ್ಲಿ ಇದೇ ಹೆಸರಿನ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಾಜಕೀಯ ಏನೇ ಇದ್ರೂ ಇವರ ಜೀವನ ಸುಖಕರವಾಗಿರಲಿ ಅಂತ ಹಾರೈಸೋಣ.

-masthmagaa.com

Contact Us for Advertisement

Leave a Reply