ಇಮ್ರಾನ್‌ ಖಾನ್‌ ಮತ್ತು ಲೆಕ್ಕವಿಲ್ಲದಷ್ಟು ಗೆಳತಿಯರು!

masthmagaa.com:

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​ರನ್ನ ಪಾಕಿಸ್ತಾನಿಯರೇ ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಬಿಸಾಕಿದ್ದಾರೆ. ಟಿವಿ ಷೋ ಒಂದರಲ್ಲಿ ಮಾತಾಡ್ತಿದ್ದಾಗ ಇಮ್ರಾನ್​ ಖಾನ್ ತಮ್ಮ ನಾಲಗೆಯನ್ನ ಲಾಜಿಕ್ ಇಲ್ಲದೇ ಹರಿಬಿಟ್ಟಿದ್ದೇ ಇದಕ್ಕೆ ಕಾರಣ. ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಹಾಗೂ ಅತ್ಯಾಚಾರದಂತ ಪ್ರಕರಣಗಳು ಜಾಸ್ತಿ ಆಗ್ತಿವೆ ಅಲ್ವಾ ಅಂತಾ ಕೇಳಿದಾಗ, ಪಾಕ್ ಪ್ರಧಾನಿ ಇಮ್ರಾನ್ ಖಾನ್​, ಇದೆಕ್ಕೆಲ್ಲ ಮಹಿಳೆಯರ ಮೈತೋರಿಸೋ ಬಟ್ಟೆಗಳೇ ಕಾರಣ ಅಂತಾ ಹೇಳಿದ್ದಾರೆ. ಯಾವುದೋ ಖಟ್ಟರ್​ಪಂತೀಯ ಧಾರ್ಮಿಕ ನಾಯಕ ಈ ಮಾತು ಹೇಳಿದ್ದರೆ, ಅವರ ಹಿನ್ನೆಲೆ ಆ ಥರ ಇದೆ ಸೋ ಹೇಳ್ತಿದಾರೆ ಅನ್ನಬೋದಿತ್ತು. ಆದ್ರೆ ಈ ಇಮ್ರಾನ್​ ಖಾನ್​​ ಪಾಕ್ ಪ್ರಧಾನಿ ಆಗೋಕೂ ಮೊದಲು ಬ್ರಿಟನ್​ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಾಗೂ ನಂತರ ಸೂಪರ್​ಸ್ಟಾರ್ ಕ್ರಿಕೆಟರ್​ ಆಗಿದ್ದಾಗ ಹೇಗಿದ್ದರು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಅವರ ಈ ಹಿಂದಿನ ಲೆಕ್ಕವಿಲ್ಲದಷ್ಟು ವಿದೇಶೀ ಮಹಿಳೆಯರೊಂದಿಗಿನ ಲವ್​ ಲೈಫ್ ಹಾಗೂ ಅರೆಬರೆ ಬಟ್ಟೆ ತೊಟ್ಟ ಪೋಟೋಗಳನ್ನೆಲ್ಲ ಇಟ್ಟುಕೊಂಡು ಟ್ರೋಲ್ ಮಾಡಲಾಗ್ತಿದೆ. ನಮಗೂ ಕೂಡ ಈ ಮಟ್ಟಿಗೆ ಅಂತ ಗೊತ್ತಿರಲಿಲ್ಲ. ಸೋ ನೋಡಣ ಅಂತ ಚೆಕ್ ಮಾಡಿದ್ರೆ, ಒಂದು ಟೈಟಲ್ ನಮ್ಮ ಗಮನ ಸೆಳೀತು. ಅದರಲ್ಲಿ ಇಮ್ರಾನ್ ಖಾನ್​ ಅವರ ಗೆಳತಿಯರ ಪೈಕಿ ಟಾಪ್​ 22 ಜನರ ಲಿಸ್ಟ್​​ ಇಲ್ಲಿದೆ ಅಂತ ಇತ್ತು. ಟಾಪ್ 22! ಇದನ್ನ ನೋಡಿನೇ ನಮಗೆ ಗಾಬರಿ ಆಯ್ತು. ಅಷ್ಟೆಲ್ಲ ಪುರುಸೊತ್ತಿಲ್ಲ ಈಯಪ್ಪನ ಸಾಧನೆ ನೋಡೋಕೆ ಅಂತಾ.. ಸಣ್ಣ ಫಿಲ್ಟರ್ಡ್​​ ಲಿಸ್ಟ್​ ಯಾರಾದ್ರೂ ಕೊಟ್ಟಿದಾರಾ ಅಂತ ಚೆಕ್ ಮಾಡಿದ್ವಿ. ಆಗ ಸಾಲು ಸಾಲು ಪಟ್ಟಿಗಳು ಸಿಕ್ವು.

ಇಮ್ರಾನ್​ ಖಾನ್​ ಗೆಳತಿಯರು:

1982ರಿಂದ 86 – ಬ್ರಿಟನ್​ನ ಚಿತ್ರ ಕಲಾವಿದೆ ಎಮ್ಮಾ ಸಾರ್ಜೆಂಟ್

1987ರಿಂದ 1991 – ಬ್ರಿಟನ್​ನ ಉದ್ಯಮಿ ಗೋರ್ಡೋನ್ ವೈಟ್ ಮಗಳು ಸೀತಾ ವೈಟ್

1992 ರಿಂದ 1994 – ಜೆರ್ಮನ್​ ನಿರೂಪಕಿ ಕ್ರಿಸ್ಟಿಯಾನೇ ಬ್ಯಾಕರ್

ಆಕ್ಸ್​ಫರ್ಡ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ಸಹಪಾಠಿಯಾಗಿದ್ದ ಪಾಕ್ ಮಾಜಿ ಪ್ರಧಾನಿ ದಿವಂಗತ ಬೆನಝೀರ್ ಭುಟ್ಟೋ ಜೊತೆ ಕೂಡ ಇಮ್ರಾನ್​​ ಹತ್ತಿರ ಆಗಿದ್ರು. ಬೆನಝೀರ್ ತಂದೆ ಜುಲ್ಫಿಕರ್ ಅಲಿ ಭುಟ್ಟೋ ಕೂಡ ಪಾಕ್ ಪ್ರಧಾನಿಯಾಗಿದ್ದವರು. ಸೋ ಪ್ರಧಾನಿಯ ಮಗಳು ಯಾಕ್ ಬೇಕು ಅಂತ ಇಮ್ರಾನ್ ದೂರ ಇರಲಿಲ್ಲ. 2009ರಲ್ಲಿ ಬಂದ ಕ್ರಿಸ್ಟೋಫರ್ ಸ್ಟಾಂಡ್​ಫೋರ್ಡ್​​ ಬರೆದ ಇಮ್ರಾನ್ ಖಾನ್​ ಜೀವನ ಚರಿತ್ರೆಯಲ್ಲೂ ಇಮ್ರಾನ್ ಹಾಗೂ ಪಾಕ್ ಮಾಜಿ ಪ್ರಧಾನಿ ಬೆನಝೀರ್ ಭುಟ್ಟೋ ಸಂಬಂಧದ ಬಗ್ಗೆ ಉಲ್ಲೇಖಿಸಲಾಗಿದೆ.

ನಂತರ ಬಾಲಿವುಡ್ ನಟಿ ಝೀನತ್ ಅಮಾನ್, ಹಾಲಿವುಡ್​ ನಟಿ ಗೋಲ್ಡೀ ಹಾವ್ನ್​​ ತನಕ ಹತ್ತಾರು ಸೆಲೆಬ್ರಿಟಿ ಸುಂದರಿಯರೂ ಇಮ್ರಾನ್ ಖಾನ್​​ ಬದುಕಿನ ಪುಟಗಳಲ್ಲಿ ಒಂದಷ್ಟು ಪೇಜು ಗೀಚಿ ಹೋಗಿದ್ದಾರೆ ಅಂತಾ ವರದಿಗಳಿವೆ.

ಇದರಲ್ಲಿ ಬ್ರಿಟನ್​ನ ಉದ್ಯಮಿ ಗೋರ್ಡೋನ್ ವೈಟ್ ಮಗಳು ಸೀತಾ ವೈಟ್ ಅಂತೂ ತನ್ನ ಮಗಳಿಗೆ ಇಮ್ರಾನೇ ತಂದೆ ಅಂತ ಕೋರ್ಟ್​ಗೂ ಹೋಗಿದ್ರು. ಆದ್ರೆ ಇಮ್ರಾನ್ ಒಪ್ಪಲಿಲ್ಲ. ಆಮೇಲೆ ಡಿಎನ್​ಎ ಪರೀಕ್ಷೆ ನಡೆಸಿದಾಗ ಸೀತಾ ವೈಟ್ ಮಗು ಟೈರಿಯನ್ ವೈಟ್​ಗೆ ಇಮ್ರಾನೇ ತಂದೆ ಅಂತ ಸಾಬೀತಾಯ್ತು. ಆದ್ರೆ ಅದಾಗಿ ಕೆಲ ಸಮಯದಲ್ಲೇ ಸೀತಾ ವೈಟ್ ತಮ್ಮ 43ನೇ ವಯಸ್ಸಲ್ಲಿ ಪ್ರಾಣ ಕಳ್ಕೊಂಡ್ರು. ಆಗ ಮಗು ಕಥೆ ಏನು ಅನ್ನೋ ಪ್ರಶ್ನೆ ಬಂದಿತ್ತು. ನಂತರ ಇಮ್ರಾನ್​ ಖಾನ್ 42 ವರ್ಷಗಳ​ ಬ್ಯಾಚುಲರ್​ ಲೈಫ್ ಸಾಕು ಅಂತ 1995ರಲ್ಲಿ ಜೆಮೈಮಾ ಗೋಲ್ಡ್​ಸ್ಮಿತ್​ರನ್ನ ಮದುವೆಯಾದ್ರು. ಈ ಮದುವೆ 2004ರಲ್ಲಿ ಮುರಿದು ಡಿವೋರ್ಸ್ ಆಯ್ತು. ಆದ್ರೆ ಇಮ್ರಾನ್​ ಖಾನ್ ಮಾಜಿ ಗೆಳತಿಗೆ ಹುಟ್ಟಿದ ಮಗು ಟೈರಿಯನ್ ವೈಟ್​​ರನ್ನ ಜೆಮೈಮಾ ತಮ್ಮ ಮಗಳಂತೆಯೇ ನೊಡಿಕೊಂಡಿದ್ದರು. ಮುಂದೆ ಇಮ್ರಾನ್​ ಖಾನ್​ ಜೊತೆ ಡಿವೋರ್ಸ್ ಆದಮೇಲೂ ಟೈರಿಯನ್ ವೈಟ್​ಳನ್ನ ತನ್ನ ಮಗಳಂತೆಯೇ ನೋಡಿಕೊಂಡಿದ್ದಾರಂತೆ. ಆದ್ರೆ ಇಮ್ರಾನ್​ಖಾನ್ ಮಿಂಚಿನ ಓಟ ಮಾತ್ರ ನಿಂತೇ ಇಲ್ಲ.

2015ರಲ್ಲಿ ರೇಹಮ್​ ಖಾನ್​ರನ್ನ ಮದುವೆಯಾದ್ರು. ಆದ್ರೆ ರೇಹಾಮ್ ಖಾನ್​ಗೆ ಅದೇನಾಯ್ತೋ ಗೊತ್ತಿಲ್ಲ. ಒಂದು ವರ್ಷದ ಒಳಗೆ ಇಮ್ರಾನ್​ರಿಂದ ವಿಚ್ಚೇದನ ಪಡೆದು ದೂರ ಹೋದ್ರು. ಈ ಥರ ಎರಡನೇ ಮದುವೆ ಢಮಾರ್ ಆಯ್ತು. ಆದರೂ ಛಲ ಬಿಡದ ಇಮ್ರಾನ್ ಖಾನ್ ತಾವು ಪ್ರಧಾನಿಯಾದ ವರ್ಷ 2018ರಲ್ಲಿ ತಮ್ಮ ಆಧ್ಯಾತ್ಮಿಕ ಗೈಡ್ ಆಗಿದ್ದ ಬುಶ್ರಾ ಬಿಬಿಯನ್ನ ಮದುವೆ ಆಗಿದ್ದಾರೆ. ಈ 3ನೇ ಮದುವೆ ಆಗುವಾಗ ಇಮ್ರಾನ್ 65 ವರ್ಷದ ಅಜ್ಜ.

ಒಂದೇ ವರ್ಷದಲ್ಲಿ ದೂರ ಹೋದ ರೇಹಮ್ ಖಾನ್ ನಂತರ ಇಮ್ರಾನ್ ಜೊತೆಗಿನ ಭಯಾನಕ ಕ್ಷಣಗಳ ಕುರಿತು ಬುಕ್ ಬರೆದ್ರು. ರೇಹಮ್ ಖಾನ್ ಹೆಸರಿನ ಈ ಪುಸ್ತಕದಲ್ಲಿ ಇಮ್ರಾನ್​ ಖಾನ್ ಒಬ್ಬ ಮಹಾನ ಕ್ರೂರಿ ಅಂತ ಬರೆಯಲಾಗಿತ್ತು. ಹಾಗೂ ಇಮ್ರಾನ್​ಗೆ ಸಲಿಂಗಿತನದ ಗುಣಗಳಿವೆ ಅಂತಲೂ ಆರೋಪಿಸಿದ್ರು ರೇಹಮ್ ಖಾನ್. ಈ ಪುಸ್ತಕದ ಬಗ್ಗೆ ಭಾರೀ ಚರ್ಚೆ ಆಗ್ತಿದ್ದಾಗ ಮೊದಲ ಪತ್ನಿ ಜೆಮೈಮಾ ಗೋಲ್ಡ್​ಸ್ಮಿತ್​ ಕೂಡ ನನಗೂ ಇಂತಹ ಅನುಭವಗಳಾಗಿವೆ ಅಂತ ಹೇಳಿ ಇಮ್ರಾನ್​​ ಟೆನ್ಶನ್​ ಜಾಸ್ತಿ ಮಾಡಿದ್ದರು.

ಹೇಳಿಕೇಳಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಆಲ್​ರೌಂಡರ್ ಕ್ಯಾಪ್ಟನ್​ ಇಮ್ರಾನ್​ ಖಾನ್. ಸ್ವಿಂಗ್​ ಬೌಲಿಂಗ್​ನ ಲೆಜೆಂಡ್. ಸೋ ಅದ್ಯಾವ್ಯಾವ್ ಥರದ ಸ್ವಿಂಗ್ ಮಾಡಿದ್ರೋ ಗೊತ್ತಿಲ್ಲ. ಎದುರಿಗೆ ಬಂದವರನ್ನೆಲ್ಲ ತಮ್ಮ ಪ್ರೀತಿಯಲ್ಲಿ ಬೀಳಿಸಿದ್ದಾರೆ. ಪ್ರೀತಿಯಲ್ಲಿ ಅನ್ನೋ ಶಬ್ದ ಬಳಸೋದು ಸರಿಯೋ ತಪ್ಪೋ ಗೊತ್ತಿಲ್ಲ. ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಆದ್ರೆ ಇಮ್ರಾನ್​ ಖಾನ್ ಈಗ ಸಡನ್ನಾಗಿ ಆಧುನಿಕ ವೇಷಭೂಷ, ಮೈಕಾಣುವ ಉಡುಪು ಇತ್ಯಾದಿಗಳು ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಕಾರಣ ಅಂತ ಹೇಳಿದಾಗ ಪಾಕಿಸ್ತಾನದಲ್ಲೂ ಅವರ ಈ ಹಿನ್ನೆಲೆ ಎಲ್ಲ ತೆಗೆದು ಟ್ರೋಲ್ ಮಾಡ್ತಿದಾರೆ.

-masthmagaa.com

Contact Us for Advertisement

Leave a Reply