ಇಂಡೋನೇಷ್ಯಾದಲ್ಲಿ ಮೋದಿ! ವಿದೇಶದಲ್ಲೂ ʻಭಾರತ್‌ʼ ಪ್ರಯೋಗ!

masthmagaa.com:

ಆಸಿಯಾನ್‌ (Association of Southeast Asian Nations) ಶೃಂಗಸಭೆಯಲ್ಲಿ ಪಾಲ್ಗೊಂಡಿರೊ ಪ್ರಧಾನಿ ಮೋದಿ, ಸಭೆಯಲ್ಲಿ ಇಂಡಿಯಾ ಬದಲು ಭಾರತ್‌ ಅಂತ ಹೇಳಿದ್ದಾರೆ. ಇಂಡಿಯಾ-ಆಸಿಯಾನ್‌ ಬದಲಾಗಿ, ಭಾರತ್- ಆಸಿಯಾನ್‌ ಅಂದಿರೋದು ದೇಶದ ಹೆಸರನ್ನ ಅಧಿಕೃತವಾಗಿ ಭಾರತ್‌ ಅಂತ ಮಾಡುವ ಸುದ್ದಿಗಳಿಗೆ ಪುಷ್ಠಿ ಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸಭೆಯಲ್ಲಿ ಭಾಷಣ ಆರಂಭಿಸಿದ ಮೋದಿ, ಭಾರತ್‌ -ಆಸಿಯಾನ್‌ ಅಂತ ಸಂಬೋಧಿಸಿದ್ದಾರೆ. ಇನ್ನು ಇಂಡೋನೇಷ್ಯಾದ ರಾಜಧಾನಿ ಜಕಾರ್ತ ತಲುಪಿರೊ ಮೋದಿಗೆ ಅಲ್ಲಿನ ಭಾರತೀಯರಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಅಲ್ಲಿನ ರಿಟ್ಜ್‌ ಕಾರ್ಲ್ಟನ್ ಹೋಟೆಲ್​ನಲ್ಲಿ ಮೋದಿಯನ್ನ ಸ್ವಾಗತಿಸಲು ನೆರೆದಿದ್ದ ಅನಿವಾಸಿ ಭಾರತೀಯರು ವಂದೇ ಮಾತರಂ ಹಾಡಿ, ಮೋದಿ ಮೋದಿ ಅಂತ ಜೈಕಾರದ ಕೂಗಿದ್ದಾರೆ. ಇದೇ ವೇಳೆ ಮಕ್ಕಳು ಸೇರಿದಂತೆ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಮೋದಿ ಸಂವಾದ ನಡೆಸಿದ್ದಾರೆ. 20ನೇ ಆಸಿಯಾನ್ – ಭಾರತ ಶೃಂಗಸಭೆಯಲ್ಲಿ ಭಾಗವಹಿಸಿರೊ ಮೋದಿ, ಭಾರತದ ಆಕ್ಟ್‌ ಈಸ್ಟ್‌ ಪಾಲಿಸಿಗೆ ಆಸಿಯಾನ್‌ ಒಕ್ಕೂಟ ಪಿಲ್ಲರ್‌ ಇದ್ದಂಗೆ ಅಂತ ಹೇಳಿದ್ದಾರೆ. ಜೊತೆಗೆ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಆಸಿಯಾನ್‌ನ ಭಾಗವಹಿಸುವಿಕೆಯನ್ನ ಭಾರತ ಸಪೋರ್ಟ್‌ ಮಾಡುತ್ತೆ. ನಮ್ಮ ಸಂಬಂಧ 4ನೇ ದಶಕಕ್ಕೆ ಕಾಲಿಟ್ಟಿದ್ದು, ಇಂಡೋ-ಪೆಸಿಫಿಕ್‌ ಇನಿಶಿಯೇಟಿವ್‌ನಲ್ಲಿ ಆಸಿಯಾನ್‌ ಪ್ರಮುಖ ಸ್ಥಾನವನ್ನ ಹೊಂದಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ 1967ರಲ್ಲಿ ಥೈಲೆಂಡ್‌ನಲ್ಲಿ ಸ್ಥಾಪನೆಯಾಗಿರೊ ಆಸಿಯಾನ್‌, 10 ಸದಸ್ಯ ರಾಷ್ಟ್ರಗಳನ್ನ ಹೊಂದಿದೆ. ಆಸಿಯಾನ್‌ನಲ್ಲಿ ಭಾರತ ಅಧಿಕೃತ ಸದಸ್ಯತ್ವವನ್ನ ಹೊಂದಿಲ್ಲ. ಇನ್ನು ಇದೇ ವೇದಿಕೆಯಲ್ಲಿ ಮಾತಾಡಿರೊ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್‌ ಸುಕ್‌ ಯೋಲ್‌, ಅಂತಾರಾಷ್ಟ್ರೀಯ ಶಾಂತಿಯನ್ನ ಹಾಳು ಮಾಡುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಜೊತೆಗೆ ಇರುವ ಸೇನಾ ಸಹಕಾರ ಈಗಲೇ ಸ್ಟಾಪ್‌ ಆಗಬೇಕು ಅಂತ ಹೇಳಿದ್ದಾರೆ. ಇತ್ತ ಆಸಿಯಾನ್‌ ಶೃಂಗಸಭೆ ವಿರುದ್ಧ ಚೀನಾ ಕಿಡಿಕಾರಿದೆ. ವಿಶ್ವ ನಾಯಕರು ಇಂಡೋನೇಷ್ಯಾದಲ್ಲಿ ಸೇರಿಕೊಂಡು, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಶತ್ರುತ್ವವನ್ನ ಬೆಳೆಸುವ ಕೆಲಸ ಮಾಡ್ತಿದಾರೆ ಅಂತ ಚೀನಾ ಪ್ರಧಾನಿ ಲಿ ಕಿಯಾಂಗ್‌ ಸಭೆಯನ್ನ ಖಂಡಿಸಿದ್ದಾರೆ.

-masthmagaa.com

Contact Us for Advertisement

Leave a Reply