ಪಾಕ್‌ ಬಳಿ ಏರ್‌ಪೋರ್ಟ್‌ ನಿರ್ವಹಣೆಗೂ ಹಣವಿಲ್ಲ! ಪ್ಲೇನ್‌ನಲ್ಲಿ ಭಿಕ್ಷೆ ಬೇಡಿದ ಪಾಕ್‌ ವ್ಯಕ್ತಿ?

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರೋ ಪಾಕಿಸ್ತಾನಕ್ಕೆ ತನ್ನ ಏರ್‌ಪೋರ್ಟ್‌ಗಳನ್ನ ನಡೆಸೋಕೆ ಸಾಧ್ಯವಾಗ್ತಿಲ್ಲ ಅಂತ ತಿಳಿದು ಬಂದಿದೆ. ಪಾಕಿಸ್ತಾನದ ಫಾರೆಕ್ಸ್‌ ಅಥ್ವಾ ವಿದೇಶಿ ವಿನಿಮಯ ಮೀಸಲು ಕೊರತೆ ಉಂಟಾಗಿರೋದ್ರಿಂದ ತನ್ನ ಪ್ರಮುಖ ಏರ್‌ಪೋರ್ಟ್‌ಗಳನ್ನ ಹೊರಗುತ್ತಿಗೆ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಹಣಕಾಸು ಸಚಿವ ಇಶಾಕ್‌ ದಾರ್‌ ಅವ್ರು ವಿದೇಶಿ ಗುತ್ತಿಗೆದಾರರ ಬಳಿ ಮಾತುಕತೆ ನಡೆಸುತ್ತಿದ್ದು, ಇಸ್ಲಮಾಬಾದ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ್ನ ಹೊರಗುತ್ತಿಗೆದಾರರ ಕಾರ್ಯಾಚರಣೆಗೆ ನೀಡುವ ಕುರಿತು ಫೈನಲೈಸ್‌ ಮಾಡಲಿದ್ದಾರೆ ಅಂತ ವರದಿಯಾಗಿದೆ. ಪಾಕಿಸ್ತಾನದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಆಗಸ್ಟ್‌ 12 ಪ್ರಸ್ತುತ ಸರ್ಕಾರದ ಕೊನೆಯ ದಿನವಾಗಿದೆ. ಹೀಗಾಗಿ ಅಷ್ಟರೊಳಗೆ ಏರ್‌ಪೋರ್ಟ್‌ಗಳ ಕಾರ್ಯಾಚರಣೆಯನ್ನು ಹೊರಗುತ್ತಿಗೆ ನೀಡಲು ಕ್ರಮ ಕೈಗೊಳ್ಳಲಾಗ್ತಿದೆ ಅಂತ ಮಾಹಿತಿ ಲಭ್ಯವಾಗಿದೆ. ಇತ್ತ ವಿದೇಶದಲ್ಲಿರುವ PML-N ಮುಖ್ಯಸ್ಥ ನವಾಜ್‌ ಷರೀಫ್‌ ಅವ್ರು ಪಾಕಿಸ್ತಾನಕ್ಕೆ ಮತ್ತೆ ಬಂದ್ರೆ ದೇಶದ ಭವಿಷ್ಯನೇ ಚೇಂಜ್‌ ಆಗುತ್ತೆ ಅಂತ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. PML-Nನ ಸಂಪೂರ್ಣ ನಾಯಕತ್ವವನ್ನ ನವಾಜ್‌ ವಹಿಸಿಕೊಂಡ್ರೆ ದೇಶದ ಅಭಿವೃದ್ಧಿಯಾಗಲಿದ್ದು, ಸಮೃದ್ಧಿಯ ಹಾದಿಯಲ್ಲಿ ಸಾಗಲಿದೆ ಅಂತ ಶೆಹಬಾಜ್‌ ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರೋ PML-N ಗಡಿಪಾರಾಗಿರುವ ತಮ್ಮ ಮುಖ್ಯಸ್ಥ ನವಾಜ್‌ರನ್ನ ಪಾಕಿಸ್ತಾನಕ್ಕೆ ಮರಳಿ ಕರೆತರೋ ಪ್ಲಾನ್‌ ಮಾಡ್ತಿದೆ. ಇದಕ್ಕಾಗಿ ಈಗಾಗಲೇ ಸಂಸದರ ಅನರ್ಹತೆಯನ್ನ ಗರಿಷ್ಠ 5 ವರ್ಷಗಳಿಗೆ ಸೀಮಿತಗೊಳಿಸುವ ಕಾನೂನನ್ನು ಅಂಗೀಕರಿಸಿದೆ. ಇನ್ನೊಂದ್‌ ಕಡೆ ಪಾಕಿಸ್ತಾನದ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಾಯಣಿಕರ ಬಳಿ ಹಣ ಕೇಳ್ತಿರೋ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಲಾಹೋರ್‌ನಲ್ಲಿ ಮದರಸಾ ಕಟ್ಟಿಸಲು ಫಂಡ್‌ ಕಲೆಕ್ಟ್‌ ಮಾಡ್ತಿದ್ದು, ತಾನು ಭಿಕ್ಷೆ ಬೇಡ್ತಿಲ್ಲ ಅಂತ ಹೇಳಿಕೊಂಡಿದ್ದಾರೆ. ಆದ್ರೆ ಪಾಕಿಸ್ತಾನ ಆರ್ಥಿಕ ಹಿಂಜರಿತ ಫೇಸ್‌ ಮಾಡ್ತಿರೋ ಸಮಯದಲ್ಲೇ ಈ ವ್ಯಕ್ತಿ ಹಣ ಕೇಳ್ತಿರೋದ್ರಿಂದ ಸೋಷಿಯಲ್‌ ಮೀಡಿಯಾದಲ್ಲಿ ಹಲವು ಬಳಕೆದಾರರು ಟ್ರೋಲ್‌ ಹಾಗೂ ಟೀಕೆ ಮಾಡ್ತಿದಾರೆ.

-masthmagaa.com

Contact Us for Advertisement

Leave a Reply