ಪಾಕಿಸ್ತಾನದಲ್ಲಿ ಭಾರಿ ಮಳೆ: 7 ಮಂದಿ ಬಲಿ, ಹಲವರಿಗೆ ಗಾಯ

masthmagaa.com:

ದಕ್ಷಿಣದ ಮಡಗಾಸ್ಕರ್‌ ನಂತರ ಈಗ ಉತ್ತರದ ಪಾಕಿಸ್ತಾನದಲ್ಲೂ ಮತ್ತೊಮ್ಮೆ ಮಳೆಯ ಆರ್ಭಟ ಶುರುವಾಗಿದೆ. ಪಾಕ್‌ನ ಆಗ್ನೇಯದ ಖೈಬರ್‌ ಪಖ್ತುಂಕ್ವಾಗೆ ಸೇರಿದ ಕೆಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ 8 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂತ ತಿಳಿದುಬಂದಿದೆ. ಉಳಿದಂತೆ 12 ಮಂದಿ ಗಾಯಗೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಾಕ್‌ನಲ್ಲಿ ಉಂಟಾದ ಮಳೆಗೆ 30 ಮಂದಿ ಮೃತಪಟ್ಟಿದ್ರು. ಈಗ ಮತ್ತೊಮ್ಮೆ ಮಳೆ ಭೋರ್ಗರೆದಿದೆ. ಅಲ್ಲಿನ ರಸ್ತೆಗಳಲ್ಲಿ ಹಿಮದಂತೆ ಆಲಿಕಲ್ಲಿನ ರಾಶಿ ಬಿದ್ದಿದೆ. ಹಲವು ಕಡೆ ಭೂಕುಸಿತ, ಪ್ರವಾಹ ಉಂಟಾಗಿದೆ.

ಇನ್ನು ಇದೇ ಪಾಕ್‌ನ ಹೊಸ ಸರ್ಕಾರಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೊದಲ ಬಾರಿಗೆ ಒಂದು ಪತ್ರ ಬರೆದಿದ್ದಾರೆ. ಬೈಡೆನ್‌ ಅಧಿಕಾರಕ್ಕೆ ಬಂದಾಗ್ಲಿಂದ ಪಾಕ್‌ ಜೊತೆ ನೇರವಾಗಿ ಸಂಪರ್ಕ ಸಾಧಿಸಿರ್ಲಿಲ್ಲ. ಆದ್ರೆ ಈಗ ಬರೆದಿರೋ ಪತ್ರದಲ್ಲಿ, ಜಾಗತಿಕ ಹಾಗೂ ಸ್ಥಳೀಯ ಸಮಸ್ಯೆಗಳನ್ನ ಬಗೆಹರಿಸೋಕೆ ಶಹಬಾಜ್‌ ಷರೀಫ್‌ ಸರ್ಕಾರಕ್ಕೆ ಸಹಕಾರ ಕೊಡ್ತೀವಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply