ಪಾಕ್‌ ಚುನಾವಣೆ: ಇಮ್ರಾನ್‌ಖಾನ್‌ Vs ನವಾಜ್‌ ಷರೀಫ್‌ ಬಿಗ್ ಫೈಟ್!

masthmagaa.com:

ತೀವ್ರ ಕುತೂಹಲ ಕೆರಳಿಸಿರೋ ಪಾಕಿಸ್ತಾನದ ಚುನಾವಣೆಯಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಆರಂಭದಲ್ಲಿ ಮುನ್ನೆಡೆ ಕಾದುಕೊಂಡಿದ್ದ ಇಮ್ರಾನ್‌ ಖಾನ್‌ರ ಪಕ್ಷ ಈಗ ದಿಢೀರ್‌ ಅಂತ ನವಾಜ್‌ ಷರೀಫ್‌ರಿಂದ ನೆಕ್‌ಟು ನೆಟ್‌ ಫೈಟ್‌ ಎದುರಿಸ್ತಿದೆ. ಈ ವಿಡಿಯೋ ರೆಕಾರ್ಡ್‌ ಮಾಡುವ ಹಂತಕ್ಕೆ ಇಮ್ರಾನ್‌ ಖಾನ್‌ರ ಸುಮಾರು 49 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇನ್ನೊಂದು ಕಡೆ ಮಾಜಿ ಪ್ರಧಾನಿ ನವಾಜ್ ಷರೀಫ್‌ ಅವರ ಪಿಎಂಎಲ್‌ಎನ್‌ ಪಕ್ಷ 42 ಕ್ಷೇತ್ರಗಳಲ್ಲಿ ವಿನ್‌ ಆಗಿದೆ. ಆ ಕಡೆ ಬಿಲಾವಲ್‌ ಭುಟ್ಟೋ ಅವರ ಪಿಪಿಪಿ ಅಂದ್ರೆ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ 34 ಸೀಟಲ್ಲಿ ಗೆದ್ದಿದೆ. ಇನ್ನುಳಿದಂತೆ ಜೆಯುಐ – ಎಫ್‌ 1 ಸೀಟು ಇತರರು 8 ಸೀಟಲ್ಲಿ ಗೆದ್ದಿದ್ದಾರೆ. ನಾವು ಇಷ್ಟೊತ್ತೊರೆಗೂ ಹೇಳಿದ್ದು ಪಾಕ್‌ನ ಚುನಾವಣಾ ಆಯೋಗ ಕೊಟ್ಟಿರೋ ಲೆಕ್ಕ. ಆದ್ರೆ ಪಾಕ್‌ನ ರಾಜಕೀಯ ಪಕ್ಷಗಳೆಲ್ಲವೂ ನಾವು ಗೆದ್ವಿ ನಾವು ಗೆದ್ದಿದ್ದೀವಿ ಅಂತ ಸೆಲೆಬ್ರೇಟ್‌ ಮಾಡ್ತಿದ್ದಾರೆ. ಜೈಲಲ್ಲಿರೋ ಇಮ್ರಾನ್‌ ಖಾನ್‌ 106 ಸೀಟಲ್ಲಿ ನಾವು ವಿನ್‌ ಆಗಿದ್ದೀವಿ ಅಂತ ಹೇಳಿದ್ದಾರೆ. ಈ ಕಡೆ ನವಾಜ್ ಷರೀಫ್‌ ವಿಕ್ಟರಿ ಸ್ಪೀಚ್‌ ಕೊಡೋಕೆ ತಯಾರಿ ನಡೆಸ್ತಿದ್ದಾರೆ ಅಂತ ಸುದ್ದಿ ಬರ್ತಿದೆ. ಒಟ್ಟಾರೆ ಪಾಕಿಸ್ತಾನದ ಚುನಾವಣೆಯಲ್ಲಿ ಯಾರ್‌ ಗೆದ್ದಿದ್ದಾರೆ ಅನ್ನೋದು ಈ ಕ್ಷಣಕ್ಕೆ ಅಸ್ಪಷ್ಟವಾಗಿ ಉಳಿದಿದೆ. ಆದ್ರೆ ಈಗಿರೋ ಲೆಕ್ಕಚಾರದ ಪ್ರಕಾರ ಇಮ್ರಾನ್‌ ಒಂದು ವೇಳೆ ಹೆಚ್ಚು ಸೀಟು ಪಡ್ಕೊಂಡ್ರೂ ಅವರನ್ನ ಪ್ರಧಾನಿ ಮಾಡೊಕೆ ಪಾಕ್‌ ಸೇನೆ ಬಿಡಲ್ಲ. 342 ಸೀಟು ಇರೋ ಪಾಕ್‌ ಅಸಂಬ್ಲಿಯಲ್ಲಿ 266 ಪ್ರತಿನಿಧಿಗಳು ಚುನಾವಣೆ ಮೂಲಕ ಆಯ್ಕೆಯಯಾಗ್ತಾರೆ. ಇನ್ನುಳಿದವು ಮೀಸಲಾಗಿವೆ. ಸೋ ಆ 266 ಸೀಟಲ್ಲಿ ಮೆಜಾರಿಟಿ ಬೇಕು ಅಂದ್ರೆ 134 ಸೀಟು ಬೇಕು. ಹೀಗಾಗಿ ಈ ಸಲವೂ ಪಿಪಿಪಿ ಅಂದ್ರೆ ಭುಟ್ಟೋ ಪಕ್ಷ ಹಾಗೂ ನವಾಜ್‌ ಷರೀಫ್‌ ಪಾರ್ಟಿಯನ್ನೇ ಸೇನೆ ಕೂಡಿಕೆ ಮಾಡಿಸಬೋದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply