ಪಾಕ್‌ಗೆ ಎದುರಾದ ಮತ್ತೊಂದು ಸಮಸ್ಯೆ! ಏನದು?

masthmagaa.com:

ರೋಗಿಷ್ಟ ದೇಶ ಪಾಕಿಸ್ತಾನಕ್ಕೆ ದಿನಕ್ಕೊಂದರಂತೆ ಸಂಕಷ್ಟಗಳು ಎದುರಾಗ್ತಿವೆ. ಇದೀಗ ಪಾಕ್‌ನ 40 ಔಷಧ ಕಂಪನಿಗಳು ತಮ್ಮ ಉತ್ಪಾದನೆಯನ್ನ ನಿಲ್ಲಿಸೋಕೆ ಮುಂದಾಗಿವೆ. ಉತ್ಪಾದನೆಗೆ ಬೇಕಾದ ರಾ ಮಟರೀಯಲ್ಸ್‌ ಅಂದ್ರೆ ಕಚ್ಚಾ ಪದಾರ್ಥಗಳು ಲಭ್ಯವಿರದ ಕಾರಣ ಪ್ರೊಡಕ್ಶನ್‌ ನಿಲ್ಲಿಸೋದಾಗಿ ಕಂಪನಿಗಳು ಸರ್ಕಾರಕ್ಕೆ ಇನ್‌ಫಾರ್ಮ್‌ ಮಾಡಿವೆ. ಅಷ್ಟೇ ಅಲ್ದೇ ಔಷಧಗಳ ಬೆಲೆಗಳನ್ನ ಏರಿಕೆ ಮಾಡೋದಾಗಿಯೂ ಮೆಡಿಕಲ್‌ ಕಂಪನಿಗಳು ಹೇಳಿವೆ. ಹಾರ್ಡ್‌ಶಿಪ್‌ ಕೆಟಗರಿ ಅಡಿಯಲ್ಲಿ ಔಷಧಗಳ ಬೆಲೆಯನ್ನ ಏರಿಸಲಾಗುತ್ತೆ ಅಂತ ಹೇಳಲಾಗಿದೆ. ಈ ಹಾರ್ಡ್‌ಶಿಪ್‌ ಕೆಟಗರಿ ಅಂದ್ರೆ ಉತ್ಪಾದನಾ ವೆಚ್ಚ ಮಾರಾಟದ ಬೆಲೆಗಿಂತ ಅಧಿಕವಾದಾಗ ಕಂಪನಿಗಳು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತವೆ. ಆಗ ಬೆಲೆಗಳನ್ನ ಕೋರ್ಟ್‌ ಬದಲು ಕಂಪನಿಗಳು ನಿರ್ಧರಿಸುತ್ತವೆ. ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಹಣದುಬ್ಬರವನ್ನ ಫೇಸ್‌ ಮಾಡ್ತಿರೋ ಪಾಕ್‌ಗೆ ಅಗತ್ಯ ಔಷಧಗಳ ಬೆಲೆಯಲ್ಲಿ ಏರಿಕೆಯಾಗೋದು ಕೂಡ ಆತಂಕದ ವಿಷಯ ಅಂತ ತಜ್ಞರು ವಾರ್ನ್‌ ಮಾಡ್ತಿದ್ದಾರೆ. ಇತ್ತ ಪಾಕ್‌ನ ವಿದೇಶಿ ವಿನಿಮಯ ಕೂಡ ನೆಲಕಚ್ಚಿದೆ. ಕೇವಲ 3.1 ಬಿಲಿಯನ್‌ ಡಾಲರ್‌ ಅಂದ್ರೆ 25.2 ಸಾವಿರ ಕೋಟಿ ರೂಪಾಯಿಗೆ ಕುಸಿದಿದ್ದು, ಕಳೆದ 8 ವರ್ಷಗಳಲ್ಲೇ ಅತಿಕಡಿಮೆ ಮಟ್ಟಕ್ಕೆ ತಲುಪಿದೆ. ಹೀಗಾಗಿ ಅವಶ್ಯಕ ವಸ್ತುಗಳನ್ನ ಆಮದು ಮಾಡಿಕೊಳ್ಳಲು ಆಗದ ಪರಿಸ್ಥಿತಿ ಬಂದಿದೆ. ಕರಾಚಿ ಬಂದರಿನಲ್ಲಿ ಅನೇಕ ಕಂಟೇನರ್‌ಗಳು ಪಾವತಿ ಕ್ಲಿಯರ್‌ ಆಗದೇ ಹಾಗೇ ನಿಂತಿವೆ ಎನ್ನಲಾಗಿದೆ. ಅಲ್ದೇ ಡಾಲರ್‌ ಎದುರು ಪಾಕ್‌ ರೂಪಿ ತೀವ್ರ ಕುಸಿತಗೊಂಡಿದೆ. 2018ರಲ್ಲಿ 1 ಅಮೆರಿಕದ ಡಾಲರ್‌ ಎದುರು 140 ಪಾಕ್‌ ರೂಪಾಯಿ ಇತ್ತು. ಅದು ಈಗ ಡಬಲ್‌ ಆಗಿದೆ. 1 ಡಾಲರ್‌ಗೆ 270 ಪಾಕ್‌ ರೂಪಾಯಿ ಇದೆ.

-masthmagaa.com

Contact Us for Advertisement

Leave a Reply