ಪಾಕಿಸ್ತಾನದಲ್ಲಿ ಮತ್ತೆ ಇಮ್ರಾನ್‌ ಖಾನ್‌ರ ಪಕ್ಷದ ರ‍್ಯಾಲಿಗೆ ಅಡ್ಡಿ!

masthmagaa.com:

ಪಾಕಿಸ್ತಾನದಲ್ಲಿ ಮುಂದಿನ ವಾರದ ಸಾರ್ವತ್ರಿಕ ಚುನಾವಣೆಗೆ ವಿವಿಧ ಪಕ್ಷಗಳ ರ‍್ಯಾಲಿಗಳು ಜೋರಾಗಿವೆ. ಆದ್ರೆ ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಕ್ಯಾಂಪೇನ್‌ಗೆ ಪದೇ ಪದೇ ಅಡ್ಡಿ ಪಡಿಸಲಾಗ್ತಿದೆ. ಇತ್ತೀಚಿಗೆ ಆನ್ಲೈನ್‌ ಪ್ರಚಾರಕ್ಕೆ ಅಡ್ಡಿ ಮಾಡಲಾಗಿತ್ತು. ಆದ್ರೆ ಈಗ ಪೋಲಿಸರು ಟಿಯರ್‌ ಗ್ಯಾಸ್‌ ಅಂದ್ರೆ ಅಶ್ರ ವಾಯುವನ್ನ ಇಮ್ರಾನ್‌ ಬೆಂಬಲಿಗರ ಮೇಲೆ ಎರಚಿರೋ ಘಟನೆ ಕರಾಚಿಯಲ್ಲಿ ನಡೆದಿದೆ. ಅಲ್ದೇ ಪೋಲಿಸರು 20 ರಿಂದ 30 ಜನರನ್ನ ರ‍‍್ಯಾಲಿಯಲ್ಲಿ ಅರೆಸ್ಟ್‌ ಮಾಡಿದ್ದಾರೆ. ತೆಹ್ರಿಕ್-ಇ-ಇನ್ಸಾಫ್‌ ಪಕ್ಷದ ಕಾರ್ಯಕರ್ತರು ಪರ್ಮಿಶನ್‌ ಪಡೆಯದೇ ರ‍್ಯಾಲಿ ಆಯೋಜಿಸಿ ರಸ್ತೆ ತಡೆ ನಡೆಸಿದ್ರು. ಈ ವೇಳೆ ಅವ್ರ ಮನವೊಲಿಸಲು ಪೋಲಿಸರು ಮುಂದಾದಾಗ ಅವ್ರ ಹಲ್ಲೆಗೆ ಮುಂದಾದ್ರು. ಹೀಗಾಗಿ ಪೋಲಿಸರು ಟಿಯರ್‌ ಗ್ಯಾಸ್‌ ಎರಚಿ ರ‍್ಯಾಲಿ ತಡೆದಿದ್ದಾರೆ ಅಂತ ಹಿರಿಯ ಪೋಲಿಸ್‌ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply