ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ ಹಕ್ಕುಗಳ ದಮನ: ಕ್ಷೇತ್ರ ಪುನರ್‌ವಿಂಗಡಣೆ ಬಗ್ಗೆ ಪಾಕ್‌ ಕಿಡಿ

masthmagaa.com:

ಜಮ್ಮು ಕಾಶ್ಮೀರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿರೋದಕ್ಕೆ ಉರಿದು ಬಿದ್ದಿರೋ ಪಾಕ್‌, ಭಾರತದ ಕ್ರಮವನ್ನ ಅಲ್ಲಗಳೆದಿದೆ. ಇದು ಮುಸ್ಲಿಮರ ಹಕ್ಕುಗಳನ್ನ ದಮನ ಮಾಡೋ ಪ್ರಕ್ರಿಯೆ ಅಂತ ಹೇಳಿದೆ. ಈ ಬಗ್ಗೆ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಯನ್ನ ಕರೆಸಿಕೊಂಡು ಆಕ್ರೋಶ ಹೊರಹಾಕಿರೋ ಪಾಕ್‌ನ ವಿದೇಶಾಂಗ ಇಲಾಖೆ” ಜಮ್ಮು- ಕಾಶ್ಮೀರದಲ್ಲಿ ಭಾರತ ಕೈಗೊಂಡಿರೋ ಕ್ಷೇತ್ರ ವಿಂಗಡಣೆ ಕ್ರಮ ಮುಸ್ಲಿಂ ಸಮುದಾಯದ ಹಕ್ಕುಗಳನ್ನ ದುರ್ಬಲಗೊಳಿಸುವ, ಅದನ್ನು ನಿರಾಕರಣೆ ಮಾಡೋ ಉದ್ದೇಶ ಹೊಂದಿದೆ. ಈ ವರದಿಯನ್ನ ನಾವು ಒಪ್ಪುವುದಿಲ್ಲ ಅಂತ ಹೇಳಿದೆ. ಅಂದ್ಹಾಗೆ ಜಮ್ಮು ಕಾಶ್ಮೀರದಲ್ಲಿ ವಿಧಾನ ಸಭಾ ಕ್ಷೇತ್ರಗಳನ್ನ ಪುನರ್‌ ವಿಂಗಡಣೆ ವರದಿಯನ್ನ ಫೈನಲ್‌ ಮಾಡಿದ್ದು ಅದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಸುಮಾರು 24 ಕ್ಷೇತ್ರಗಳೂ ಸೇರಿವೆ.

-masthmagaa.com

Contact Us for Advertisement

Leave a Reply