ಮತ್ತೊಬ್ಬ ಪಾಕ್‌ ಉಗ್ರನ ಸಾವು! ಮುಂದುವರೆದ ಉಗ್ರರ ನಿಗೂಢ ಅಂತ್ಯ!

masthmagaa.com:

ಪಕ್ಕದ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಿದ್ದ ಮೋಸ್ಟ್‌ ವಾಂಟೆಡ್‌ ಉಗ್ರರ ನಿಗೂಢ ಸಾವುಗಳು ಕಂಟಿನ್ಯೂ ಆಗಿದೆ. ಈಗ ಪಾಕ್‌ನ ಶೇಖ್‌ ಜಮೀಲ್‌-ಉರ್‌-ರಹಮನ್‌ ಅನ್ನೋ ದೊಡ್ಡ ಉಗ್ರಹುಳು ಶವವಾಗಿ ಪತ್ತೆಯಾಗಿದ್ದಾನೆ. ಈ ಸಾವಿಗೆ ದಿಕ್ಕು, ದೆಸೆ, ಹೇಳೋರೂ ಕೇಳೋರೂ ಯಾರು ಇಲ್ಲ… ಪಾಕ್‌ನ ಖೈಬರ್‌ ಪತ್ತುಂಕ್ವಾ ಪ್ರಾಂತ್ಯದ ಅಬ್ಬೊಟ್ಟಾಬಾದ್‌ನಲ್ಲಿ ಈತನ ಶವ ಪತ್ತೆಯಾಗಿದೆ. ಈತ UJC ಅನ್ನೋ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದುTuM ಉಗ್ರ ಸಂಘಟನೆಯಲ್ಲಿ ಪ್ರಭಾವಿಯಾಗಿದ್ದ. ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರ ಕೃತ್ಯಗಳಿಗೆ ಎಲ್ಲಾ ರೀತಿಯ ಸಹಾಯ ಮಾಡ್ತಿದ್ದ. ಬಾಯಿ ಬಿಟ್ರೆ ಬರೀ ಭಾರತದ ವಿರುದ್ದ ದ್ವೇಷ ಕಾರುತ್ತಿದ್ದ. ಈಗ ವಾರಸುದಾರರಿಲ್ಲದ ಸಾವು ಕಂಡಿದ್ದಾನೆ. ಇನ್ನು ಭಾರತಕ್ಕೆ ಬೇಕಿದ್ದ ಈತನನ್ನ 2022ರ ಅಕ್ಟೋಬರ್‌ನಲ್ಲಿ ಭಾರತಯ ಗೃಹ ಸಚಿವಾಲಯ ಭಯೋತ್ಪಾದಕ ಅಂತ ಘೋಷಿಸಿತ್ತು. ಅಂದ್ಹಾಗೆ ಸ್ನೇಹಿತರೇ ಈತನ ಹಿನ್ನೆಲೆ ಕೂಡ ಸಣ್ಣದೇನಲ್ಲ. ಭಯಾನಕ ಖತರ್ನಾಕ್‌ ಉಗ್ರಕ್ರಿಮಿ ಇದು. ಈತ ಪಾಕ್‌ ಇಂಟೆಲಿಜೆನ್ಸ್‌ ಏಜೆನ್ಸಿ ಅಂದ್ರೆ ISI ಜೊತೆನೂ ಬಹಳ ಕ್ಲೋಸ್‌ ಆಗಿದ್ದ, ಅವ್ರ ಜೊತೆ ಕೆಲಸ ಮಾಡ್ತಿದ್ದ. ಅಷ್ಟೇ ಅಲ್ಲ ಈತನ TuM ಉಗ್ರ ಸಂಘಟನೆ ಜಮ್ಮು & ಕಾಶ್ಮೀರವನ್ನ ಪಾಕ್‌ ಜೊತೆ ವಿಲೀನಗೊಳಿಸೋ ಪ್ರಮುಖ ಉದ್ದೇಶ ಹೊಂದಿತ್ತಂತೆ. ಆದ್ರೆ ಈ ಗುಂಪಿನ ಸಂಸ್ಥಾಪಕ ಯುನುಸ್‌ ಖಾನ್‌ 1991ರಲ್ಲಿ ಗುಂಡೇಟಿಗೆ ಬಲಿಯಾಗಿದ್ದ. ಅದಾದ ನಂತ್ರ ಈ ಸಂಘಟನೆಗೆ ಸಿಕ್ಕಾಪಟ್ಟೆ ಹಿನ್ನಡೆಯಾಗಿತ್ತು. ಇಷ್ಟಾದ್ರೂ ಈತ ಪಾಕಿಸ್ತಾನ, ಬಾಂಗ್ಲಾ, ಸೌದಿ, ಬ್ರಿಟನ್‌, ಅಮೆರಿಕ ಮತ್ತಿತರೆ ಗಲ್ಫ್‌ ರಾಷ್ಟ್ರಗಳಿಂದ ಫಂಡ್‌ ಕಲೆಕ್ಟ್‌ ಮಾಡ್ಕೊಂಡು ಅದನ್ನ ಭಾರತದ ವಿರುದ್ದ ಬಳಸ್ತಿದ್ದ. ಜೊತೆಗೆ ಪಾಕಿಸ್ತಾನದಲ್ಲಿ ಯುನೈಟೆಡ್‌ ಜಿಹಾದ್‌ ಕೌನ್ಸಿಲ್‌ ಅನ್ನೋ ಒಂದು ಸಂಘಟನೆ ಕಟ್ಟಿ ಪಾಕ್‌ ಮೂಲದ ಜಿಹಾದಿಗಳನ್ನ ಒಂದೇ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ಸೇರಿಸಿದ್ದ. ಅವುಗಳನ್ನ ಜಮ್ಮು & ಕಾಶ್ಮೀರದಲ್ಲಿ ಆ್ಯಕ್ಟಿವ್‌ ಆಗಿರಿಸೋ ಕೆಲಸ ಮಾಡ್ತಿದ್ದ. ಈ UJCನಲ್ಲಿ LeT, JeM ಗಳಂತಹ ಅನೇಕ ಉಗ್ರ ಸಂಘಟನೆಗಳಿದ್ವು. ಉಗ್ರ ರೆಹಮನ್‌ ಈ ಸಂಘಟನೆಗಳೊಂದಿಗೆ ಕೊಆರ್ಡಿನೇಟ್‌ ಮಾಡ್ತಿದ್ದ…ಅವ್ರಿಗೆ ಟ್ರೈನಿಂಗ್‌ ಕೊಡ್ತಿದ್ದ. ಕಾಶ್ಮೀರದ ಒಳಗೆ ನುಸುಳೋಕೆ ಸಹಾಯ ಮಾಡ್ತಿದ್ದ. ಈಗ ಅವನೇ ಟಿಕೆಟ್‌ ತಗೊಂಡಿದ್ದಾನೆ. ಈಗ ಕೂಡ ಈ ಟಿಕೆಟ್‌ ಕೊಟ್ಟವರು ಯಾರು? ಹರಿದು ಅವನ ಜೇಬಿಗಿಟ್ಟವರು ಯಾರು? ಇದರ ಬಗ್ಗೆ ಚೂರು ಮಾಹಿತಿ ಇಲ್ಲ. ತನಿಖೆ ಮಾಡ್ತೀವಿ ಅಂತ ಪಾಕ್‌ನ ತನಿಖಾ ಅಧಿಕಾರಿಗಳು ಹೇಳಿದರಂತೆ. ಅದೆಷ್ಟು ಅಂತ ತನಿಖೆ ಮಾಡ್ತಾರೋ…! ಯಾಕಂದ್ರೆ ಈ ಘಟನೆ ಪಾಕ್‌ನಲ್ಲಿ ಹೊಸದೇನೂ ಅಲ್ಲ. ಭಾರತಕ್ಕೆ ಬೇಕಿದ್ದ ಮೋಸ್ಟ್‌ವಾಂಟೆಡ್‌ಗಳೆಲ್ಲಾ ಕೆಲ ತಿಂಗಳಿಂದ ಇದೇ ರೀತಿ ನಿಗೂಢವಾಗಿ ಮೃತಪಡ್ತಿದ್ದಾರೆ. ಇವ್ರನ್ನ ಹತ್ಯೆ ಮಾಡಿದ್ದು ಯಾರು ಅನ್ನೋ ಬಗ್ಗೆ ಯಾರಿಗೂ ಗೊತ್ತಿಲ್ಲ. ಒಂದೆರಡು ಸಲ ಭಾರತದ RAW ಮೇಲೆ ಇದನ್ನ ಎತ್ತಾಕೋ ಪ್ರಯತ್ನ ಮಾಡಿದ್ರು. ಆದ್ರೆ ತಮ್ಮ ದೇಶದ ಒಳಗೆ ಬಂದು ಭಾರತ ʻಟಿಕೆಟ್‌ ಇಶ್ಯೂ ಮಾಡ್ತಿದೆʼ ಅನ್ನೋದು ಪಾಕಿಸ್ತಾನಕ್ಕೂ ನಾಚಿಕೆ ಗೇಡಿನ ಕೆಲಸ ಅಲ್ವಾ. ಹೀಗಾಗಿ ಅದನ್ನೂ ಅವರು ಜಾಸ್ತಿ ಹೇಳಲಿಲ್ಲ. ಈಗ ಅದೇ ರೀತಿ ಐಎಸ್‌ಐ ತೊಡೆ ಮೇಲಿದ್ದ ಪಾಕಿ ಕೂಸು ಅಂತ್ಯಕಂಡಿದೆ. ಇದಕ್ಕೆ ಪಾಕಿಸ್ತಾನ ಯಾವ ರೀತಿ ಪ್ರತಿಕ್ರಿಯಿಸುತ್ತೆ ಕಾದು ನೋಡ್ಬೇಕು..

-masthmagaa.com

Contact Us for Advertisement

Leave a Reply