ಪಾಕಿಗಳ ಬಾಗಿಲಿಗೆ ಬಂದು ಪೀಠ ಊರಿ ಕುಳಿತ ಚೀನಾದಿಂದ ಬಂದ ಹಡಗು!

masthmagaa.com:

ಪಾಕಿಸ್ತಾನದ ಅಧಿಕಾರಿಗಳು ಕರಾಚಿ ಸಮೀಪ ಸಮುದ್ರದಲ್ಲಿ ನೆಲಕ್ಕೆ ಊರಿ ಕೂತಿರುವ ಹಡಗನ್ನ ಮೇಲಕ್ಕೆತ್ತೋಕೆ ಹರಸಾಹಸ ಪಡ್ತಿದ್ದಾರೆ. ಕಳೆದ ವಾರ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಗೋ ಶಿಪ್ ಒಂದು ಹಾಳಾಗಿ ಪಾಕಿಸ್ತಾನದ ದಕ್ಷಿಣದ ಬಂದರು ನಗರಿ ಕರಾಚಿ ಕಡಲ ತೀರದಲ್ಲಿ ನೆಲಕ್ಕೆ ಊರಿ ಕೂತುಬಿಟ್ಟಿದೆ. ಮೇಲಕ್ಕೆ ಏಳ್ತಾನೆ ಇಲ್ಲ. THE HENG TONG 77 ಹೆಸರಿನ ಈ ಕಾರ್ಗೋ ಹಡಗು ಚೀನಾದಿಂದ ಟರ್ಕಿಯ ಇಸ್ತಾಂಬುಲ್ ಕಡೆಗೆ ಹೊರಟಿತ್ತು. ಈಗ ಒಂದು ವಾರವಾದರೂ ತನ್ನ ಪೀಠವನ್ನ ಮೇಲೆತ್ತಿ ಹೊರಡಲು ಕೇಳದ ಹಡಗಿನಿಂದ ಆಯಿಲ್ ಲೀಕ್ ಆಗುವ ಭಯ ಪಾಕ್ ಅಧಿಕಾರಿಗಳನ್ನ ಕಾಡ್ತಿದೆ. ಹೀಗಾಗಿ ಹಡಗಿನ ಓನರ್ ಗೆ ತನ್ನ ಹಡಗನ್ನ ಎಬ್ಬಿಸಿ ಕರೆದುಕೊಂಡು ಹೋಗೋಕೆ ಬೇಕಾದ ವಿದೇಶೀ ಉಪಕರಣಗಳನ್ನ ತರಿಸಲು ಸಹಾಯ ಮಾಡಲು ಮುಂದಾಗಿದೆ ಪಾಕ್. ಯಾಕಂದ್ರೆ ತಾವೇ ಕೊಡಣ ಅಂದ್ರೆ ಪಾಕಿಗಳ ಬಳಿ ಅಂತ ಅತ್ಯಾಧುನಿಕ ಉಪಕರಣಗಳೆಲ್ಲ ಇಲ್ಲ. ಅಂದಹಾಗೆ ಸ್ಟಕ್ ಆಗಿರೋ ಹಡಗಿನ ಉದ್ದ 98 ಮೀಟರ್, ಅಗಲ 20 ಮೀಟರ್. ಹಾಗೇ ಇದರ ಕೆಪಾಸಿಟಿ 36,000 ಟನ್.

-masthmagaa.com

Contact Us for Advertisement

Leave a Reply