ಪಾಕ್‌ ಗುಪ್ತಚರ ಇಲಾಖೆ ISIನಿಂದ ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ!

masthmagaa.com:

ಪಾಕ್‌ನಲ್ಲಿ ನ್ಯಾಯಾಂಗ ಹಾಗೂ ಸೇನೆ ನಡುವೆ ಭಾರೀ ಸಮರವೇ ಶುರುವಾಗಿದೆ. ಅಲ್ಲಿನ ಗುಪ್ತಚರ ಇಲಾಖೆ ಐಎಸ್‌ಐ ನ್ಯಾಯಾಧೀಶರಿಗೆ ಪ್ರಾಣ ಬೆದರಿಕೆ ಹಾಕ್ತಿದೆ ಅಂತ ಆರೋಪ ಕೇಳಿ ಬಂದಿದೆ. ಬುಧವಾರ ಇಸ್ಲಾಮಾಬಾದ್‌ ಹೈ ಕೋರ್ಟ್‌ನ ಎಲ್ಲಾ ನ್ಯಾಯಾಧೀಶರಿಗೂ ವಿಷಪೂರಿತ ಪೌಡರ್‌ ಒಳಗೊಂಡ ಬೆದರಿಕೆ ಸಂದೇಶಗಳು ಬಂದಿದ್ವು. ಇದೀಗ ಲಾಹೋರ್‌ನ ನಾಲ್ವರು, ಸುಪ್ರಿಂ ಕೋರ್ಟ್‌ನ ಐವರು ಜಡ್ಜ್‌ಗಳು ಹಾಗೂ ಪಾಕ್‌ನ ಚೀಫ್‌ ಜಸ್ಟೀಸ್‌ ಖಾಜಿ಼ ಫಯೀಜ಼್ ಇಸಾಗೂ ಇಂಥದ್ದೇ ಪಾರ್ಸಲ್‌ ಬಂದಿದೆ. ಈ ಪಾರ್ಸಲ್‌ನಲ್ಲಿರೋ ಲೆಟರ್‌ನಲ್ಲಿ ಬ್ಯಾಸಿಲಸ್‌ ಆಂಥ್ರಸಿಸ್‌ ಅಂತ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಅಂದ್ರೆ ಆಂಥ್ರಾಕ್ಸ್‌ ಖಾಯಿಲೆ ಉಂಟುಮಾಡೋ ಬ್ಯಾಕ್ಟೀರಿಯಾದ ವೈಜ್ಞಾನಿಕ ಹೆಸರು. ಸೋ ಸಿಂಬಾಲಿಕ್‌ ಆಗಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಲಾಗಿದೆ. ಅಲ್ಲದೆ ಪಾಕಿಸ್ತಾನದ ಜನರು ಫೇಸ್‌ ಮಾಡ್ತಿರೋ ಕಷ್ಟಗಳಿಗೆಲ್ಲಾ ನ್ಯಾಯಾಧೀಶರೇ ಕಾರಣ ಅಂತ ಇದ್ರಲ್ಲಿ ಬರೆಲಾಗಿದೆ. ಅಲ್ದೆ ಈ ಪಾರ್ಸಲ್‌ ಓಪನ್‌ ಮಾಡಿದ ಕೆಲವು ನ್ಯಾಯಾಧೀಶರಿಗೆ, ಅಲ್ಲಿದ್ದ ಪೌಡರ್‌ನಿಂದಾಗಿ ಕಣ್ಣುಗಳಿಲ್ಲಿ ವಿಪರೀತ ಕಿರಿಕಿರಿ ಹಾಗೂ ಬಾಯಿಯಲ್ಲಿ ಉರಿ ಕಾಣಿಸಿಕೊಂಡಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಲೆಟರ್‌ಗಳನ್ನೆಲ್ಲಾ ತನಿಖೆಗಾಗಿ ಪಾಕ್‌ನ ಭಯೋತ್ಪಾದನಾ ನಿಗ್ರಹ ಇಲಾಖೆಗೆ ಕೊಡಲಾಗಿದೆ ಅಂತ ಪೊಲೀಸ್‌ ಅಧಿಕಾರಿಯೊಬ್ರು ಹೇಳಿದ್ದಾರೆ. ಅಂದ್ಹಾಗೆ ಪಾಕಿಸ್ತಾನದಲ್ಲಿ ಕಳೆದ ಕೆಲದಿನಗಳಿಂದ ಅಲ್ಲಿನ ಸೇನೆ ಹಾಗೂ ಐಎಸ್‌ಐ ವಿರುದ್ದ ಅಲ್ಲಿನ ನ್ಯಾಯಾದೀಶರು ಬಂಡಾಯ ಎದ್ದಿದ್ರು. ನ್ಯಾಯಾಂಗದ ನೇಮಕಾತಿ, ತೀರ್ಪು ಮತ್ತು ಇತರೆ ವಿಚಾರಗಳಲ್ಲಿ ತಲೆ ಹಾಕ್ತಿದ್ದಾರೆ ಅಂತ ಜಡ್ಜ್‌ಗಳು ಓಪನ್‌ ಆಗಿ ಆರೋಪ ಮಾಡಿದ್ರು. ಸುಪ್ರೀಂ ಕೋರ್ಟ್‌ಗೆ ಪತ್ರವನ್ನೂ ಬರೆದಿತ್ತು. ಇದರ ನಂತರ ಪಾಕ್ ಸುಪ್ರಿಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ಶುರು ಮಾಡಿತ್ತು. ಈ ಬೆನ್ನಲ್ಲೇ ನ್ಯಾಯಾಧೀಶರಿಗೆ ಬೆದರಿಕೆ ಬಂದಿದೆ. ಅದರಲ್ಲೂ ʻಮಾಜಿ ಪಿಎಂ ಇಮ್ರಾನ್‌ ಖಾನ್‌ ವಿಚಾರ ಸುಪ್ರಿಂ ಕೋರ್ಟ್‌ ಮೆಟ್ಟಿಲೇರ್ತಿದ್ದಂತೆ, ಗುಪ್ತಚರ ಇಲಾಖೆ ನಮಗೆ ಬೆದರಿಕೆ ಹಾಕ್ತಿದೆ. ಖಾನ್‌ ಕೇಸ್‌ಗಳ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕ್ತಿದೆ ಅಂತ ಆ ನ್ಯಾಯಾದೀಶರೆಲ್ಲಾ ಆರೋಪಿಸಿದ್ದಾರೆ. ಅಲ್ಲದೆ ಜಡ್ಜ್‌ಗಳು ಮಾಡಿರೋ ಆರೋಪದಲ್ಲಿ, ISI ನಮ್ಮ ಕುಟುಂಬಸ್ಥರನ್ನು ಕಿಡ್ನಾಪ್‌ ಮಾಡಿದೆ, ಅವರಿಗೆ ಚಿತ್ರಹಿಂಸೆ ನೀಡ್ತಿದೆ. ನಮ್ಮ ಬೆಡ್‌ ರೂಂಗಳಲ್ಲಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ ಅಂತೆಲ್ಲಾ ಆರೋಪಿಸಿದ್ದಾರೆ. ಜೊತೆಗೆ ಡೆಡ್‌ ಎಂಡ್‌ ತಲುಪಿರೋ ಕೇಸ್‌ಗಳನ್ನೂ ಮತ್ತೆ ಮತ್ತೆ ವಿಚಾರಣೆ ಮಾಡಿ ಅಂತ ಬಲವಂತ ಮಾಡ್ತಿದ್ದಾರೆ ಅಂತಲೂ ನ್ಯಾಯಾಧೀಶರೊಬ್ರು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply