ಭಾರತ ಗಡಿ ದಾಟಿದ ಪಾಕ್‌ ಪ್ರಜೆಯನ್ನ ಬಂಧಿಸಿದ ಗಡಿ ಭದ್ರತಾ ಪಡೆ!

masthmagaa.com:

ಪಾಕ್‌ ಗಡಿ ದಾಟಿ ಪಂಜಾಬ್‌ನ ಗುರುದಾಸ್ಪುರ್‌ ಜಿಲ್ಲೆಗೆ ಬಂದಿರೋ ಪಾಕ್‌ ಪ್ರಜೆಯೊಬ್ಬನನ್ನ ಇದೀಗ ಭಾರತೀಯ ಗಡಿ ಭದ್ರತಾ ಪಡೆಗಳು ಅರೆಸ್ಟ್‌ ಮಾಡಿದ್ದಾರೆ. ಆದ್ರೆ ಈತ ಯಾವ್ದೇ ರೀತಿಯ ಉದ್ದೇಶ ಹೊಂದಿಲ್ಲದೇ, ಅಪ್ಪಿತಪ್ಪಿ ಭಾರತದೊಳಗೆ ನುಗ್ಬಿಟ್ಟಿದ್ದಾನೆ. ಈತನ ಹತ್ರ ಯಾವ್ದೇ ರೀತಿ ಅನುಮಾನಾಸ್ಪದ ವಸ್ತುಗಳು ಕೂಡ ಪತ್ತೆಯಾಗಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಹೆಚ್ಚಿನ ವಿಚಾರಣೆಗೆ ಗಡಿ ಭದ್ರತಾ ಪಡೆಗಳು ಈತನನ್ನ ಪಂಜಾಬ್‌ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

-masthmagaa.com

Contact Us for Advertisement

Leave a Reply