ಪಾಕಿಸ್ತಾನದಲ್ಲಿ 1ಲೀಟರ್‌ ಪೆಟ್ರೋಲ್‌ಗೆ ಈಗ ಎಷ್ಟು ರೂ ಗೊತ್ತಾ?

masthmagaa.com:

ಪಾಕಿಸ್ತಾನದಲ್ಲಿ ಆರ್ಥಿಕ ದುಸ್ಥಿತಿ ಬಿಗಡಾಯಿಸುತ್ತಲೇ ಇದ್ದು ತೈಲ ಉತ್ಪನ್ನಗಳ ಬೆಲೆಯನ್ನ ಒಂದೇ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ನಿನ್ನೆಯಷ್ಟೇ ಪ್ರತಿಲೀಟರ್‌ ಡಿಸೇಲ್‌ಗೆ ಸುಮಾರು 148.41 ರೂಪಾಯಿ ಇದ್ದ ರೇಟ್‌ ಇಂದು ಏಕಾಏಕಿ 174.15 ರುಪಾಯಿ ಆಗಿದೆ. ಇತ್ತ ಪೆಟ್ರೋಲ್‌ ಬೆಲೆಯನ್ನ 179.85 ಕ್ಕೆ ಹಾಗೂ ಸೀಮೆಯಣ್ಣೆಯನ್ನ155.95 ಕ್ಕೆ ಏರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ ಪಾಕ್‌ನ ಹಣಕಾಸು ಸಚಿವ ಮಿಫ್ತಾಹ್‌ ಇಸ್ಮಾಯಿಲ್‌ ಹೊಸ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಬುಧವಾರವಷ್ಟೇ ಪಾಕಿಸ್ತಾನ IMF ಇಂಟರ್‌ನ್ಯಾಷನಲ್‌ ಮಾನಿಟರ್‌ ಫಂಡ್‌ ಜೊತೆಗೆ ಕತಾರ್‌ನಲ್ಲಿ ಮಾತುಕತೆ ನಡೆಸಿತ್ತು. ಪಾಕ್‌-IMF ನಡುವಿನ ಸುಮಾರು 6 ಬಿಲಿಯನ್‌ ಡಾಲರ್‌ ಆರ್ಥಿಕ ಯೋಜನೆ ಒಪ್ಪಂದಗಳು ಅಂತ್ಯವಾಗುತ್ತಿದ್ದು ಅದನ್ನ ಪುನರಾಂಭಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಪಾಕಿಸ್ತಾನಕ್ಕೆ ಸಾಲ ನೀಡಬೇಕೆಂದರೆ ಅಲ್ಲಿನ ತೈಲಕ್ಕೆ ನೀಡ್ತಿರೋ ಸಬ್ಸಿಡಿಯನ್ನ ತೆಗೆದು ಹಾಕಬೇಕು. ಕ್ರಿಯಾಶೀಲ ಯೋಜನೆಗಳಿಗೆ ಹೆಚ್ಚು ಒತ್ತು ಕೊಡ್ಬೇಕು ಅಂತ ತಾಕೀತು ಮಾಡಿದೆ. ಹೀಗಾಗಿ ಪಾಕ್‌ ಸರ್ಕಾರ ವಿಧಿ ಇಲ್ಲದೇ IMF ಒತ್ತಡಕ್ಕೆ ಮಣಿದು ತೈಲ ಬೆಲೆಯನ್ನ ಮತ್ತಷ್ಟು ದುಬಾರಿ ಮಾಡಿದೆ. ಈ ಹಿಂದೆ ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ತೈಲ ಮೇಲಿನ ಸಬ್ಸಿಡಿ ತೆಗೆದುಹಾಕ್ಬೇಕು ಅಂತ IMF ಎಷ್ಟೇ ಒತ್ತಡ ಹೇರಿದ್ರೂ ಕೂಡ ಅದನ್ನ ಮುಂದೂಡ್ತಾನೇ ಬಂದಿದ್ರು. ಇನ್ನುಈ ಬಗ್ಗೆ ಮಾತಾನಾಡಿರೋ ಇಮ್ರಾನ್‌ ಖಾನ್‌ ಭಾರತವನ್ನ ಮತ್ತೆ ಹೊಗಳಿದ್ದು ಪಾಕ್‌ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಆಮದು ಸರ್ಕಾರ ರಷ್ಯಾ ಜೊತೆಗೆ ಉತ್ತಮ ಸಂಬಂಧವನ್ನ ಇರಿಸಿಕೊಂಡಿಲ್ಲ. ಆದ್ದರಿಂದ ತೈಲ ಬೆಲೆಯನ್ನ 30% ದುಬಾರಿಗೊಳಿಸಿದೆ. ಅವರು ಮಾಡಿರೋ ಈ ಏರಿಕೆ ಪಾಕ್‌ ಇತಿಹಾಸದಲ್ಲೇ ದೊಡ್ಡದು. ಭಾರತದ ರೀತಿಯಲ್ಲಿ ತೈಲ ಬೆಲೆ ಕಡಿಮೆ ಮಾಡುವಲ್ಲಿ ಈ ಆಮದು ಸರ್ಕಾರ ವಿಫಲ ಆಗಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply