ಪಾಕ್‌ನ ಲಾಹೋರ್‌ನ ಚೌಕ್‌ಗೆ ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ಹೆಸರು!

masthmagaa.com:

ಪಾಕಿಸ್ತಾನದ ಲಾಹೋರ್‌ನ ಶಾದ್ಮಾನ್‌ ಚೌಕ್‌ಗೆ ಸ್ವಾತಂತ್ರ್ಯ ಸೇನಾನಿ ಭಗತ್‌ ಸಿಂಗ್‌ ಅವ್ರ ಹೆಸರಿಡೊ ವಿಚಾರ ಪಾಕ್‌ನಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. 1931ರಲ್ಲಿ ಅದೇ ಚೌಕ್‌ನಲ್ಲಿ ಭಗತ್‌ಸಿಂಗ್‌ರನ್ನ ಗಲ್ಲಿಗೇರಿಸಲಾಗಿದೆ ಅಂತೇಳಿ ಅವ್ರ ಸ್ಮರಣಾರ್ಥಕ್ಕಾಗಿ ಈ ಹಿಂದೆ 2018ರಲ್ಲಿ ಲಾಹೋರ್‌ ಹೈಕೋರ್ಟ್‌, ಶಾದ್ಮಾನ್‌ ಚೌಕ್‌ಗೆ ಭಗತ್‌ಸಿಂಗ್‌ ಅವ್ರ ಹೆಸರಿಡಲು ಆದೇಶ ನೀಡಿತ್ತು. ಆದ್ರೆ ಆದೇಶವನ್ನ ಪಾಲಿಸದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಪಾಕ್‌ನ ಭಗತ್‌ಸಿಂಗ್‌ ಮೆಮೋರಿಯಲ್‌ ಫೌಂಡೇಶನ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈಗ ಅರ್ಜಿ ವಿಚಾರಣೆ ನಡೆಸಿರೊ ಲಾಹೋರ್‌ ಕೋರ್ಟ್‌ಗೆ ಪಾಕ್‌ ಪಂಜಾಬ್‌ ಸರ್ಕಾರ ಈ ಚೌಕ್‌ಗೆ ಭಗತ್‌ಸಿಂಗ್‌ ಹೆಸರಿಡಲು ಸ್ವಲ್ಪ ಕಾಲಾವಕಾಶ ಕೇಳಿದೆ. ಇದಕ್ಕೆ ಸಮ್ಮತಿ ನೀಡಿರೊ ಹೈಕೋರ್ಟ್‌, ಅರ್ಜಿಯ ಮುಂದಿನ ವಿಚಾರಣೆಯನ್ನ ಜೂನ್‌7ಕ್ಕೆ ನಿಗದಿ ಪಡಿಸಿದೆ.

-masthmagaa.com

Contact Us for Advertisement

Leave a Reply