UNSC: ಚೀನಾ ಎದುರು ಭಾರತಕ್ಕೆ ಜಯ, ಪಾಕ್‌ನ ಮಕ್ಕಿ ಈಗ ಜಾಗತಿಕ ಉಗ್ರ

masthmagaa.com:

ಪಾಕಿಸ್ತಾನ್ ಮೂಲದ ಅಬ್ದುಲ್‌ ರೆಹಮಾನ್‌ ಮಕ್ಕಿ ಅನ್ನೊ ಉಗ್ರನನ್ನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಉಗ್ರ ಅಥ್ವಾ ಗ್ಲೋಬಲ್‌ ಟೆರರ್‌ ಅಂತ ಘೋಷಿಸಿದೆ. ಭದ್ರತಾ ಮಂಡಳಿಯ ಉಗ್ರನಿಗ್ರಹ ಕಮಿಟಿ ಈ ನಿರ್ಧಾರ ತೆಗದುಕೊಂಡಿದೆ. ಲಷ್ಕರ್‌ ಉಗ್ರ ಸಂಘಟನೆಯ ನಾಯಕನಾಗಿದ್ದ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನ ಜಾಗತಿಕ ಉಗ್ರ ಅಂತ ಘೋಷಿಸೋಕೆ ಭಾರತ ಹಲವು ಬಾರಿ ಪ್ರಯತ್ನ ಪಟ್ಟಿತ್ತು. ಆದ್ರೆ ವಿಟೋ ಅಧಿಕಾರ ಬಳಸ್ತಿದ್ದ ಚೀನಾ ತಮ್ಮ ಮಿತ್ರ ದೇಶದ ಅಂದ್ರೆ ಪಾಕಿಸ್ತಾನದ ಉಗ್ರರಿಗೆ ಬೆನ್ನೆಲುಬಾಗಿ ನಿಂತು ಕಾಪಾಡಿಕೊಳ್ತಿತ್ತು. ಅಂದ್ರೆ ಭದ್ರತಾ ಸಂಸ್ಥೆ ಖಾಯಂ ಸದಸ್ಯವಾಗಿರೊ ಚೀನಾ ತನ್ನ ವಿಟೋ ಪವರ್‌ ಬಳಸಿ ಭಾರತದ ಪ್ರಸ್ತಾಪವನ್ನ ತಡೆಹಿಡಿಯುತ್ತಿತ್ತು. ಆದ್ರೆ ಇದೀಗ UNSCಯ 15 ಸದಸ್ಯ ರಾಷ್ಟ್ರಗಳಲ್ಲಿ 14 ದೇಶಗಳು ಭಾರತದ ಪರವಾಗಿದ್ದು, ಚೀನಾ ಈ ಬಾರಿ ವಿಟೋ ಬಳಸಿಲ್ಲ. ಹೀಗಾಗಿ ಮಕ್ಕಿಯನ್ನ ಜಾಗತಿಕ ಉಗ್ರ ಅಂತ UNSC ಕೊನೆಗೂ ಘೋಷಿಸಿದ್ದು, ಭಾರತದ ಪ್ರಯತ್ನಗಳಿಗೆ ಚೀನಾ ಎದುರು ಜಯ ಸಿಕ್ಕಂತಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೊ ವಿಶ್ವಸಂಸ್ಥೆ, ಜನವರಿ 16, 2023 ರಂದು ಐಎಸ್‌, AQ ಹಾಗೂ ಇತರ ಉಗ್ರ ಸಂಘಟನೆಗಳು, ಗುಂಪುಗಳು ಹಾಗೂ ಸಂಸ್ಥೆಗಳನ್ನ ಗುರುತಿಸಿ ಅವನ್ನ ನಿಷೇಧಿಸೊ ಬಗ್ಗೆ UNSC ಚರ್ಚೆ ನಡೆಸಿತ್ತು. ಈ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ಪ್ರಯಾಣ ನಿಷೇಧ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳೋಕೆ ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ ಅಂತ ತಿಳಿಸಿದೆ. ಇನ್ನು ಈ ಉಗ್ರ ಮಕ್ಕಿಯನ್ನ ಭಾರತ ಹಾಗೂ ಅಮೆರಿಕ ಸರ್ಕಾರಗಳು ಈ ಮುಂಚೆಯೇ ಭಯೋತ್ಪಾದಕ ಅಂತ ತಮ್ಮ ಕಾನೂನುಗಳ ಪ್ರಕಾರ ಘೋಷಿಸಿವೆ. ಈತ ಅಕ್ರಮವಾಗಿ ಹಣ ಸಂಗ್ರಹಿಸಿ ಯುವ ಜನರನ್ನ ಭಾರತದ ವಿರುದ್ದ ಎತ್ತಿ ಕಟ್ಟೋದು, ಹಿಂಸಾಚಾರ ನಡೆಸೋದು ಅದ್ರಲ್ಲೂ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವಲ್ಲಿ ಭಾಗಿಯಾಗಿದ್ದ. ಅಂದಹಾಗೆ ಈ ಮಕ್ಕಿ, 26/11ರ ದಾಳಿಯ ಮಾಸ್ಟರ್‌ ಮೈಂಡ್ ಆಗಿದ್ದ ಹಫೀಜ್‌ ಸಯೀದ್‌ನ ಸೋದರ. ಇಂಥವನನ್ನ ಚೀನಾ ಕಳೆದ ಒಂದು ವರ್ಷದಿಂದ ಕಾಪಾಡಿಕೊಂಡು ಬಂದಿತ್ತು.

-masthmagaa.com

Contact Us for Advertisement

Leave a Reply