ಲಾಕ್​ಡೌನ್​ ವೇಳೆ ಪಾರ್ಟಿ ಮಾಡಿದ ಬ್ರಿಟನ್​ ಪ್ರಧಾನಿಗೆ ದಂಡ!

masthmagaa.com:

ಲಾಕ್‌ಡೌನ್‌ ವೇಳೆ ಪಾರ್ಟಿ ಮಾಡಿ ವಿವಾದ ಎಬ್ಬಿಸಿದ್ದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್​​ಗೆ ದಂಡ ವಿಧಿಸಲಾಗಿದೆ. ಲಂಡನ್‌ನ ಡೌನಿಂಗ್‌ ಸ್ಟ್ರೀಟ್‌ ಪೋಲೀಸರು ಜಾನ್ಸನ್‌ಗೆ ದಂಡ ಕಟ್ಟುವಂತೆ ನೋಟಿಸ್‌ ಕಳುಹಿಸಿದ್ದಾರೆ. ಪಾರ್ಟಿಯಲ್ಲಿ ಬ್ರಿಟನ್‌ನ ಹಣಕಾಸು ಸಚಿವ ಭಾರತ ಮೂಲದ ರಿಷಿ ಸುನಾಕ್‌ ಕೂಡ ಭಾಗಿಯಾಗಿದ್ರು. ಈಗ ಅವರಿಗೂ ನೋಟಿಸ್ ಜಾರಿ‌ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಕೆ ಪಿಎಂ ಬೋರಿಸ್‌ ಜಾನ್ಸನ್, ನಾನು ಇದಕ್ಕೆ ಮತ್ತೊಮ್ಮೆ ಕ್ಷಮೆಯಾಚಿಸ್ತಿದ್ದು, ದಂಡ ಕಟ್ತೀನಿ ಅಂತ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ 2020ರ ಏಪ್ರಿಲ್‌ 19ರಂದು ಕೋವಿಡ್‌ ನಿರ್ಬಂಧ ನಡುವೆಯೇ ಬ್ರಿಟನ್‌ ಪಿಎಂ ಪಾರ್ಟಿ ನಡೆಸಿದ್ರು. ಇದರ ವಿರುದ್ದ ಬ್ರಿಟನಾದ್ಯಂತ ಭಾರಿ ಆಕ್ರೋಶ ಕೇಳಿ ಬಂದಿತ್ತು.

-masthmagaa.com

Contact Us for Advertisement

Leave a Reply