ಡೊನಾಲ್ಡ್ ಟ್ರಂಪ್‌ ಆಡಳಿತದಲ್ಲಿ ಮೆಡಿಕಲ್‌ ಹಗರಣ: ಪೆಂಟಗಾನ್‌‌ ವರದಿ!

masthmagaa.com:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದಲ್ಲಿ ಮೆಡಿಕಲ್‌ ಸ್ಕ್ಯಾಮ್‌ ಆಗಿದೆ ಅಂತ ಪೆಂಟಗಾನ್‌ ವರದಿಯಿಂದ ಗೊತ್ತಾಗಿದೆ. ಈ ಬಗ್ಗೆ ಜನವರಿ 8 ರಂದು ವರದಿ ಪೆಂಟಗಾನ್‌ ವರದಿ ರಿಲೀಸ್‌ ಮಾಡಿತ್ತು. ವರದಿಯಲ್ಲಿ ಟ್ರಂಪ್‌ ಅಧಿಕಾರದಲ್ಲಿದ್ದಾಗ ಅಮೆರಿಕ ಶ್ವೇತ ಭವನದ ವೈದ್ಯಕೀಯ ಘಟಕ, ಅಕ್ರಮವಾಗಿ ಔಷಧಿಗಳನ್ನ ಬೇರೆಯವ್ರಿಗೆ ನೀಡಿದೆ. ಅಲ್ಲದೇ ಜೆನರಿಕ್‌ ಔಷಧಿಗಳಿಗೆ ಸಾವಿರಾರು ಡಾಲರ್‌ಗಳ ದುಬಾರಿ ಹಣವನ್ನ ಖರ್ಚು ಮಾಡಿದೆ. ವೈಟ್‌ಹೌಸ್‌ನ ಮೆಡಿಕಲ್ ಯಿನಿಟ್‌ ಮಿಲಟರಿ ಆಫೀಸ್‌ನ ಭಾಗವಾಗಿದ್ರು ಫೆಡೆರಲ್‌ ಸರ್ಕಾರ ಮತ್ತು ರಕ್ಷಣಾ ಇಲಾಖೆಯ ಮಾರ್ಗಸೂಚಿ ಅನುಸರಿಸಿಲ್ಲ ಅಂತ ಪೆಂಟಗಾನ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply