ದೇಶಾದ್ಯಂತ ಪೆಟ್ರೋಲ್‌ ಪಂಪ್‌ಗಳಿಂದ ಪ್ರತಿಭಟನೆ! ಇವ್ರ ಬೇಡಿಕೆ ಏನು?

masthmagaa.com:

ದೇಶಾದ್ಯಂತ 24 ರಾಜ್ಯಗಳ ಪೆಟ್ರೋಲ್‌ ಪಂಪ್‌ಗಳು ಇವತ್ತು ತೈಲ ಮಾರಾಟ ಕಂಪನಿಗಳಿಂದ ಇಂಧನಗಳನ್ನ ಖರೀದಿಸೋಲ್ಲ ಅಂತ ಪ್ರತಿಭಟನೆ ಮಾಡಿವೆ. ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಹೆಚ್ಚಿಗೆ ಆಗ್ತಿದ್ರೂ ಪಂಪ್‌ಗಳ ಕಮಿಷನ್‌ನಲ್ಲಿ ಯಾವುದೇ ಹೆಚ್ಚಳ ಆಗಿಲ್ಲ. ಪ್ರತಿ 6 ತಿಂಗಳಿಗೆ ಡೀಲರ್‌ ಮಾರ್ಜಿನ್‌ಗಳನ್ನ ಪರಿಷ್ಕರಿಸ್ಬೇಕು. ಆದ್ರೆ ತೈಲ ಮಾರಾಟ ಕಂಪನಿಗಳು 2017ರಿಂದ ಮಾಡಿಲ್ಲ ಅಂತ ಪೆಟ್ರೋಲ್‌ ಪಂಪ್‌ ಡೀಲರ್ಸ್‌ ಅಸೋಸಿಯೇಷನ್‌ ಹೇಳಿದೆ. ಇನ್ನು ಶೇಕಡ 2 ರಷ್ಟಿರುವ ಕಮೀಷನ್‌ ಅನ್ನು ಶೇಕಡ 5 ಕ್ಕೆ ಹೆಚ್ಚಿಸ್ಬೇಕು ಮತ್ತು ಅಬಕಾರಿ ಸುಂಕ ಕಡಿತದಿಂದ ಅದ ನಷ್ಟವನ್ನ ತುಂಬಿಕೊಡ್ಬೇಕು ಅಂತ ಆಗ್ರಹಿಸಿವೆ.

 

 

-masthmagaa.com

Contact Us for Advertisement

Leave a Reply