ಭಾರತದ “ತೇಜಸ್‌” ಲಘು ಯುದ್ದ ವಿಮಾನ ಖರೀದಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

masthmagaa.com:

ಭಾರತ ದೇಶೀಯವಾಗಿ ತಯಾರಿಸಿರೊ ತೇಜಸ್‌ ಲಘು ಯುದ್ದ ವಿಮಾನವನ್ನ ಖರೀದಿಸಲು ನೈಜೀರಿಯಾ, ಪಿಲಿಫೀನ್ಸ್‌, ಅರ್ಜಂಟೀನಾ ಮತ್ತು ಈಜಿಪ್ಟ್ ದೇಶಗಳು ಆಸಕ್ತಿ ತೋರಿವೆ ಅಂತ HAL ಚೇರ್‌ಮನ್‌ ಸಿ.ಬಿ. ಅನಂತ್‌ಕೃಷ್ಣನ್‌ ಹೇಳಿದ್ದಾರೆ. ಈ ಹಿಂದೆ ಜುಲೈನಲ್ಲಿ ಅರ್ಜಂಟೀನಾ ರಕ್ಷಣಾ ಸಚಿವ ಭಾರತಕ್ಕೆ ಭೇಟಿ ನೀಡಿ ರಕ್ಷಣಾ ಕೈಗಾರಿಕಾ ಪಾಲುದಾರಿಕೆಯನ್ನ ಹೆಚ್ಚಿಸುವತ್ತ ಮಾತುಕತೆ ನಡೆಸಿದ್ರು. ಇದರ ಬೆನ್ನಲ್ಲೇ HAL, ಅರ್ಜಂಟೀನಾ ಏರ್‌ಪೋರ್ಸ್‌ನೊಂದಿಗೆ ಟು ಟನ್‌ ಕ್ಲಾಸ್‌ ಹೆಲಿಕ್ಯಾಪ್ಟರ್‌ಗಳ ಬಿಡಿ ಭಾಗಗಳ ಸೇವೆಗಳನ್ನ ಒದಗಿಸಲು ಒಪ್ಪಂದ ಮಾಡಿಕೊಂಡಿದೆ. ಅಂದ್ಹಾಗೆ ಬ್ರಿಟನ್‌ ಮತ್ತು ಅರ್ಜಂಟೀನಾ ಮಧ್ಯೆ 1982ರ ʻಫಾಕ್ಲ್ಯಾಂಡ್‌ʼ ಯುದ್ದದಿಂದಾಗಿ ಬ್ರಿಟನ್‌ ಅರ್ಜೆಂಟೆನಾಗೆ ಮಿಲಟರಿ ಸಾಮಗ್ರಿಗಳ ರಫ್ತಿಗೆ ನಿಷೇಧ ಹೇರಿತ್ತು. ಹೀಗಾಗಿ ಯುಕೆ ಸಹಾಯದಿಂದ ತಯಾರಿಸಿರೋ ತೇಜಸ್‌ ಯುದ್ದ ವಿಮಾನವನ್ನ ಅರ್ಜೆಂಟೆನಾ ನೀಡೋ ಬಗ್ಗೆ ಭಾರತಕ್ಕೆ ಸಮಸ್ಯೆಯಾಗಬಹುದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply