ಇಸ್ರೋ ವಿಜ್ಞಾನಿಗಳ ಎದುರು PM ಮೋದಿ ಭಾವುಕ!

masthmagaa.com:

ಚಂದ್ರಯಾನ-3 ಮಿಷನ್‌ ಸಕ್ಸಸ್‌ ಆದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಬೆಂಗಳೂರಿನಲ್ಲಿರುವ ಇಸ್ರೋ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಚಂದ್ರಯಾನ-3 ಮಿಷನ್‌ನ ಯಶಸ್ಸಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನ ಅಭಿನಂದಿಸಿದ್ದಾರೆ. ಜೊತೆಗೆ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವ್ರನ್ನ ಕಂಡೊಡನೆ ಬೆನ್ನು ತಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತಾಡಿರುವ ಮೋದಿ ಮೂರು ಪ್ರಮುಖ ಘೋಷಣೆ ಮಾಡಿದ್ದಾರೆ. ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆದ ಸ್ಥಳಕ್ಕೆ ʻಶಿವಶಕ್ತಿ ಪಾಯಿಂಟ್‌ʼ ಅಂತ ಹೆಸರಿಟ್ಟಿದ್ದಾರೆ. ಈ ಹೆಸರಿನಲ್ಲಿ ಶಕ್ತಿ, ಮಿಷನ್‌ನಲ್ಲಿ ಮಹಿಳೆಯರ ಹಾರ್ಡ್‌ ವರ್ಕ್‌ ತೋರಿಸುತ್ತದೆ ಅಂತ ಮೋದಿ ಹೇಳಿದ್ದಾರೆ. ಜೊತೆಗೆ ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ಕಾರ್ಯಾಚರಣೆ ನಡೆಸಿದ ಆಗಸ್ಟ್‌ 23ನ್ನ ಪ್ರತಿವರ್ಷ ʻನ್ಯಾಷನಲ್‌ ಸ್ಪೇಸ್‌ ಡೇʼ ಆಗಿ ಆಚರಿಸಲಾಗುತ್ತೆ ಅಂತ ಅನೌನ್ಸ್‌ ಮಾಡಿದ್ದಾರೆ. ಅಷ್ಟೆ ಅಲ್ದೆ 2019ರಲ್ಲಿ ಚಂದ್ರನ ಮೇಲೆ ಇಳಿಯುವಲ್ಲಿ ವಿಫಲವಾಗಿದ್ದ ವಿಕ್ರಮ್‌ ಲ್ಯಾಂಡರ್‌ ಕ್ರ್ಯಾಶ್‌ ಆದ ಸ್ಥಳವನ್ನ ʻತಿರಂಗ ಪಾಯಿಂಟ್‌ʼ ಅಂತ ಕರೆದಿದ್ದಾರೆ. 2008ರಲ್ಲಿ ಭಾರತ ಕೈಗೊಂಡಿದ್ದ ಮೊದಲ ಮಿಷನ್‌ ಚಂದ್ರಯಾನ-1ರ ಇಂಪ್ಯಾಕ್ಟ್‌ ಪ್ರೋಬ್‌ನ್ನ ಚಂದ್ರನ ಮೇಲೆ ಇಳಿಸಿದ್ದ ಸ್ಥಳಕ್ಕೆ ʻಜವಾಹರ್‌ ಸ್ಥಳʼ ಅಥವಾ ʻಜವಾಹರ್‌ ಪಾಯಿಂಟ್‌ʼ ಅಂತ ಇಡಲಾಗಿತ್ತು. ಇನ್ನು ಇದೇ ವೇಳೆ ಮಾತಾಡಿದ ಮೋದಿ, ಅವತ್ತೆ ಅಂದ್ರೆ ಲ್ಯಾಂಡರ್‌ ಕ್ರ್ಯಾಶ್‌ ಆದಾಗಲೇ ಹೆಸರು ಕೊಡಲು ಸರಿಯಾದ ಸಮಯ ಆಗಿರಲಿಲ್ಲ. ಆದ್ರೆ ಈ ಐತಿಹಾಸಿಕ ಸಾಧನೆಗೆ ಆ ವಿಫಲತೆಯೇ ಮೆಟ್ಟಿಲಾಗಿರೋ ಕಾರಣ ಇಂದು ಹೆಸರು ಕೊಡ್ತಿದ್ದೇವೆ ಅಂತ ಹೇಳಿದ್ದಾರೆ. ಇನ್ನು ಚಂದ್ರಯಾನ-3ರ ಲ್ಯಾಂಡ‌ರ್‌ ಚಂದ್ರನ ಮೇಲೆ ಇಳಿದಾಗ ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಅಲ್ಲಿಂದ ಗ್ರೀಸ್ ಪ್ರವಾಸಕ್ಕೆ ತೆರಳಿದೆ. ಆದರೆ, ನನ್ನ ಮನಸ್ಸೆಲ್ಲ ಇಲ್ಲಿಯೇ ಇತ್ತು. ದೂರ ಇದ್ದು ನಿಮಗೆ ಅನ್ಯಾಯ ಮಾಡುತ್ತಿದ್ದೀನೇನೋ ಅನ್ನೋ ಭಾವನೆ ಮೂಡಿತ್ತು. ಅದಕ್ಕಾಗಿ ಗ್ರೀಸ್‌ನಿಂದ ನೇರ ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಅಭಿನಂದಿಸಿದ ಬಳಿಕ ಸಮಾಧಾನವಾಗಿದೆ. ನಿಮ್ಮನ್ನೆಲ್ಲಾ ಅದಷ್ಟು ಬೇಗ ಭೇಟಿ ಮಾಡಬೇಕು ಅನ್ಕೊಂಡಿದ್ದೆ. ನಿಮಗೆ ಮತ್ತು ನಿಮ್ಮ ಎಫರ್ಟ್ಸ್‌ಗೆ ಸಲ್ಯೂಟ್‌ ಮಾಡ್ತೀನಿ ಅಂತ ಮೋದಿ ಭಾವುಕರಾಗಿದ್ದಾರೆ. ಬಳಿಕ ಸೋಮನಾಥ್‌ ಅವ್ರು ಮೋದಿಯವರಿಗೆ ಚಂದ್ರಯಾನ-3ರ ಮಾಡೆಲ್‌ ನೀಡಿ ಗೌರವಿಸಿದ್ದಾರೆ.

-masthmagaa.com

Contact Us for Advertisement

Leave a Reply