ಅಣುಬಾಂಬ್‌ ಯುದ್ಧ ತಡೆದ ಮೋದಿ! ಅಮೆರಿಕದ CNN ರಿಪೋರ್ಟ್‌!

masthmagaa.com:

ಪ್ರಧಾನಿ ಮೋದಿ ಜಗತ್ತಲ್ಲಿ ಅಣುಯುದ್ದ ಆಗೋದನ್ನ ತಪ್ಪಿಸಿದ್ರು ಅಂತ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಯುಕ್ರೇನ್‌ ಮೇಲೆ ರಷ್ಯಾ ನಡೆಸ್ಬೇಕಂತಿದ್ದ ಪರಮಾಣು ದಾಳಿ ತಡೆಯೋದ್ರಲ್ಲಿ ಪ್ರಧಾನಿ ಮೋದಿ ಮತ್ತು ಇತರೆ ಕೆಲ ರಾಷ್ಟ್ರಗಳು ಪ್ರಮುಖ ಪಾತ್ರವನ್ನ ವಹಿಸಿದ್ವು. ಮೋದಿ ಮತ್ತು ಇತರೆ ರಾಷ್ಟ್ರಗಳು ಪುಟಿನ್‌ಗೆ ನೀಡಿರೋ ಸಲಹೆಯಿಂದ ರಷ್ಯಾದ ಅಘಾತಕಾರಿ ಪ್ಲಾನ್‌ ನಿಂತ್ಹೋಯ್ತು ಅಂತ ಅಮೆರಿಕ ಮೂಲದ ಸಿಎನ್‌ಎನ್‌ ರಿಪೋರ್ಟ್‌ ಮಾಡಿದೆ. ಆ ರಿಪೋರ್ಟ್‌ ಪ್ರಕಾರ, 2022ರಲ್ಲಿ ರಷ್ಯಾ-ಯುಕ್ರೇನ್‌ ಯುದ್ಧ ಪ್ರಾರಂಭವಾದಾಗ, ರಷ್ಯಾ ತಲೇಲಿ ಅಂದ್ರೆ ಪುಟಿನ್‌ ತಲೇಲಿ ಈ ʻಪರಮಾಣು ದಾಳಿʼ ಪ್ಲಾನ್‌ ಓಡಾಡ್ತಾ ಇತ್ತು. ರಷ್ಯಾ ಯುಕ್ರೇನ್‌ ವಿರುದ್ಧಅಣ್ವಸ್ತ್ರ ಬಳಕೆ ಮಾಡ್ಬೋದು ಅನ್ನೋ ಭಯ ಅಮೆರಿಕಗೂ ಇತ್ತು. ಯಾಕಂದ್ರೆ… ಯುಕ್ರೇನ್‌, ನಮ್ಮ ವಿರುದ್ಧ ನಿಷೇಧಿತ ಸ್ಫೋಟಕ ಬಳಸುತ್ತೆ…ದಾಳಿ ಮಾಡುತ್ತೆ ಅಂತ ಅವತ್ತು ರಷ್ಯಾ ಆರೋಪ ಮಾಡ್ತಿತ್ತು. ರಷ್ಯಾದ ರಕ್ಷಣಾ ಕಚೇರಿಗಳಿಂದ ಅದೆಷ್ಟೋ ಫೋನ್‌ ಕಾಲ್‌ಗಳು ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ಮತ್ತು ಟರ್ಕಿಗೆ ಬಂದಿದ್ವು. ಈ ದೇಶಗಳಿಗೆ ಕಾಲ್‌ ಮಾಡಿ ರಷ್ಯಾ ಪದೇ ಪದೇ ಈ ರೀತಿಯ ಆರೋಪ ಮಾಡಿತ್ತು. ಸೋ ಅಮೆರಿಕಕ್ಕೆ ರಷ್ಯಾದ ಈ ಆರೋಪವೇ ಭಯ ಹುಟ್ಟಿಸೋಕೆ ಶುರುವಾಗಿತ್ತು. ಇದೇ ನೆಪವನ್ನ ಇಟ್ಕೊಂಡು ರಷ್ಯಾ ಯುಕ್ರೇನ್‌ ಮೇಲೆ ಪರಮಾಣು ದಾಳಿ ಮಾಡೋಕೆ ಮುಂದಾಗುತ್ತೆ ಅಂತ ಇದರ ಬಗ್ಗೆ ಅಮೆರಿಕಕ್ಕೆ ಟೆನ್ಶನ್‌ ಶುರುವಾಗಿತ್ತು. ಅಲ್ದೆ ಅಮೆರಿಕ ಕೂಡ 2022ರಲ್ಲಿ ಅಣುಯುದ್ದಕ್ಕೆ ಸಾಕಷ್ಟು ತಯಾರಿ ಕೂಡ ಮಾಡಿತ್ತು ಅಂತ ಈ ರಿಪೋರ್ಟ್‌ನಲ್ಲಿ ಹೇಳಲಾಗಿದೆ. ಆದ್ರೆ ಭಾರತದ ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ರ ಮಧ್ಯಸ್ಥಿಕೆಯಿಂದ ಈ ದೊಡ್ಡ ಗಂಡಾಂತರ ತಪ್ಪಿ ಹೋಯ್ತು. ಆ ಎರಡೂ ನಾಯಕರು ಪುಟಿನ್‌ ಜೊತೆ ಮಾತುಕತೆ ನಡೆಸಿ….ಸಲಹೆ ನೀಡಿ…ಪರಮಾಣು ಅನಾಹುತ ತಪ್ಪಿಸಿದ್ದಾರೆ ಅಂತ ಆ ರಿಪೋರ್ಟ್‌ನಲ್ಲಿ ಹೇಳಲಾಗಿದೆ. ಶಾಂಘೈ ಸಹಕಾರ ಸಭೆಯಲ್ಲಿ ಪುಟಿನ್‌ ಜೊತೆಗೆ ಮೋದಿ ಮಾತಾಡಿದ್ರು. ʻಇದು ಯುದ್ದ ಮಾಡೊ ಕಾಲವಲ್ಲ ಅಂತ ಮೋದಿ ಹೇಳಿದ್ರು. ಹೀಗಾಗಿ ಪುಟಿನ್‌ ತಮ್ಮ ಮಿತ್ರರಾಷ್ಟ್ರಗಳಿಂದಲೇ ಇದಕ್ಕೆ ವಿರೋಧ ಇದೆ ಅಂತೇಳಿ ತಮ್ಮ ಪ್ಲಾನ್‌ನ್ನ ಬದಿಗೆ ಸರಿಸಿದ್ರು ಅಂತ ಆ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply