G20 ಯಶಸ್ವಿ ಮುಕ್ತಾಯ! ತವರಿಗೆ ಮರಳಿದ ವಿಶ್ವ ನಾಯಕರು!

masthmagaa.com:

ದೆಹಲಿಯಲ್ಲಿ ಎರಡು ದಿನ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿ ಮುಗಿದಿದ್ದು, ಮುಂದಿನ ವರ್ಷದ ಜಿ20 ಅಧ್ಯಕ್ಷತೆಯನ್ನ ಬ್ರೆಜಿಲ್‌ ಅಧ್ಯಕ್ಷ ಲುಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರ ಮಾಡಿದ್ದಾರೆ. ಆದ್ರೆ ನವೆಂಬರ್‌ವರೆಗೂ 2023ರ ಜಿ20 ಅಧ್ಯಕ್ಷತೆ ಜವಾಬ್ದಾರಿ ಭಾರತಕ್ಕಿರಲಿದೆ. ಈ ಹಿನ್ನಲೆಯಲ್ಲಿ ಉಳಿದಿರುವ ಎರಡೂವರೆ ತಿಂಗಳಲ್ಲಿ ಅನೇಕ ವಿಷಯಗಳ ಚರ್ಚೆ ನಡೆಸಬೇಕಿದೆ. ಜೊತೆಗೆ ಈಗ ಬಂದಿರುವ ಸಲಹೆಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಹಾಗೂ ಅವುಗಳ ಪ್ರಗತಿಯನ್ನು ಹೇಗೆ ವೇಗಗೊಳಿಸಬಹುದು ಅನ್ನೋದನ್ನ ಗಮನಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ನವೆಂಬರ್ ಅಂತ್ಯದಲ್ಲಿ ಜಿ20 ವರ್ಚ್ಯುವಲ್ ಅಧಿವೇಶನವನ್ನ ನಡೆಸಲು ನಿರ್ಧರಿಸಲಾಗಿದೆ ಅಂತ ಮೋದಿ ಹೇಳಿದ್ದಾರೆ. ಇನ್ನು ಇಂದು ಜಿ20 ಸಭೆ ಮುಕ್ತಾಯವಾದ ಹಿನ್ನಲೆಯಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ದಂಪತಿ ಬ್ರಿಟನ್‌ಗೆ ವಾಪಾಸ್‌ ತೆರಳಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರುವ ಸುನಾಕ್‌, ಒಗ್ಗಟ್ಟಿನಲ್ಲಿ ಬಲವಿದೆ, ಐತಿಹಾಸಿಕ ಜಿ-20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಜೊತೆಗೆ ಆತ್ಮೀಯ ಸ್ವಾಗತ ಕೋರಿದ ಭಾರತೀಯರಿಗೆ ಧನ್ಯವಾದಗಳು. ಅಲ್ದೆ ಜಾಗತಿಕ ಆಹಾರ ಭದ್ರತೆಯಿಂದ ಹಿಡಿದು ಅಂತಾರಾಷ್ಟ್ರೀಯ ಪಾಲುದಾರಿಕೆವರೆಗೂ ಯಶಸ್ವಿ ಶೃಂಗಸಭೆಯಾಗಿತ್ತು ಅಂತ ಬರೆದುಕೊಂಡಿದ್ದಾರೆ. ಇನ್ನು ಸಭೆ ಮುಕ್ತಾಯ ಹಿನ್ನಲೆ ಹಲವು ಜಾಗತಿಕ ನಾಯಕರು ಇಂದು ತಮ್ಮ ದೇಶಗಳಿಗೆ ವಾಪಾಸಾಗಿದ್ದಾರೆ. ಅಂದ್ಹಾಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ವಿಯೆಟ್ನಾಂ ಪ್ರವಾಸಕ್ಕಾಗಿ ಇಂದು ಜಿ20 ಫೈನಲ್‌ ಸೆಶನ್‌ನಲ್ಲಿ ಭಾಗಿಯಾಗದೆ ಬೆಳಗ್ಗಯೇ ತೆರಳಿದ್ದಾರೆ.

-masthmagaa.com

Contact Us for Advertisement

Leave a Reply