ಪ್ರಧಾನಿ ನರೇಂದ್ರ ಮೋದಿ ಮೆಂಟಲಿ ವೀಕ್‌ ಆಗಿದ್ದಾರೆ: ಸಚಿವ ತಿಮ್ಮಾಪುರ

masthmagaa.com:

ಪ್ರಧಾನಿ ನರೇಂದ್ರ ಮೋದಿ ಮೆಂಟಲಿ ವೀಕ್‌ ಆಗಿದ್ದಾರೆ. ದೇಶದಲ್ಲಿ ಇಷ್ಟೊಂದು ದುರ್ಬಲ ಪ್ರಧಾನಿ ಅಂದ್ರೆ ಮೋದಿ ಒಬ್ಬರೇ ಅಂತ ಸಚಿವ ಆರ್.ಬಿ ತಿಮ್ಮಾಪುರ ಲೇವಡಿ ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ತಿಮ್ಮಾಪುರ, ಮೋದಿ ಅತ್ಯಂತ ದುರ್ಬಲ ಪ್ರಧಾನಿ. ಮೋದಿ ಎಂದಾದ್ರೂ ಪ್ರೆಸ್ ಮೀಟ್ ಮಾಡಿದ್ದಾರಾ..? ಯಾವತ್ತಾದ್ದರೂ ಪತ್ರಕರ್ತರನ್ನ ಎದುರಿಸಿದ್ದಾರಾ..? ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ಶಕ್ತಿ ಮೋದಿಗಿಲ್ಲ. ಸದನದಲ್ಲಿ ವಿಪಕ್ಷಗಳ ನಾಯಕರಿಗೂ ಉತ್ತರ ನೀಡಲ್ಲ ಅಂತ ಟೀಕಿಸಿದ್ದಾರೆ. ಜೊತೆಗೆ ಮೋದಿ ಅವರು ಸಾಧನೆ ಮಾಡಿದ್ದಾರೆ ಅಂತಾರೆ. ಅದಾನಿ, ಅಂಬಾನಿ ಅವರ ಸಾಲಮನ್ನಾ ಮಾಡಿದ್ದು ಮೋದಿ ಸಾಧನೆಯೇ? ಅಂತ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply