ಅತ್ಯಾಚಾರ ಕೇಸ್‌: 14 ತಿಂಗಳ ನಂತ್ರ ರಿಲೀಸ್‌ ಆದ ಮುರುಘಾಶ್ರೀ

masthmagaa.com:

ಪೋಕ್ಸೋ ಕೇಸ್‌ನಲ್ಲಿ 14 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರನ್ನ ಇಂದು ಬಿಡುಗಡೆ ಮಾಡಲಾಗಿದೆ. ಇಬ್ಬರು ಹೈಸ್ಕೂಲ್‌ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಮುರುಘಾಶ್ರೀ ವಿರುದ್ಧ ಎರಡು ಪೋಕ್ಸೊ ಪ್ರಕರಣಗಳು ದಾಖಲಾಗಿದ್ದವು. ಈ ಕೇಸ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶ್ರೀಗಳು ಅರೆಸ್ಟ್‌ ಆಗಿದ್ರು. ನವೆಂಬರ್‌ 8ರಂದು ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ಜಿನ್ನಲೆಯಲ್ಲಿ ಇಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ರಿಲೀಸ್‌ ಮಾಡಲಾಗಿದೆ. ಆದ್ರೆ ಚಿತ್ರದುರ್ಗದಲ್ಲಿರೋಕೆ ಕೋರ್ಟ್‌ ಅನುಮತಿ ನೀಡದ ಕಾರಣ ಮುರುಘಾಶ್ರೀ ದಾವಣಗೆರೆಗೆ ತೆರಳಿದ್ದಾರೆ.

-masthmagaa.com

Contact Us for Advertisement

Leave a Reply