ಪಂಜಾಬ್‌ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ: ಕಲ್ಲು ತೂರಾಟ, ಜಳಪಿಸಿದ ಕತ್ತಿಗಳು

masthmagaa.com:

ಪಂಜಾಬ್‌ನ ಪಟಿಯಾಲದಲ್ಲಿ ಇವತ್ತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮತ್ತು ಕತ್ತಿ ಹಿಡಿದು ಪ್ರದರ್ಶಿಸಿರೋದು ಕೂಡ ವರದಿಯಾಗಿದೆ. ಪೋಲಿಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿರೋದಾಗಿ ಗೊತ್ತಾಗಿದೆ. ಪಂಜಾಬ್‌ನ ಶಿವಸೇನೆ ಇವತ್ತು ಖಲಿಸ್ತಾನ್‌ ವಿರೋಧಿ ಮೆರವಣಿಗೆಯನ್ನ ಹಮ್ಮಿಕೊಂಡಿತ್ತು ಈ ವೇಳೆ ಶಿವಸೇನೆಯ ಕಾರ್ಯಕರ್ತರು ಖಲಿಸ್ತಾನ್‌ ಮುರ್ದಾಬಾದ್‌ ಅನ್ನೋ ಘೋಷಣೆಗಳನ್ನ ಕೂಗಿದ್ದಾರೆ. ಆಗ ಖಲಿಸ್ತಾನ್‌ ಪರ ಸಿಖ್‌ ಸಂಘಟನೆಯೊಂದು ಮುಖಾಮುಖಿಯಾಗಿದ್ದು ಘರ್ಷಣೆ ಶುರುವಾಗಿದೆ. ಪೋಲಿಸರ ಪ್ರಕಾರ ಶಿವಸೇನೆ ಮೆರವಣಿಗೆ ನಡೆಸಲು ಅನುಮತಿ ಪಡೆದಿರಲಿಲ್ಲ. ಇನ್ನು ಜನ್ರು ಶಾಂತಿ ಕಾಪಾಡಬೇಕು ಅಂತ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮನವಿ ಮಾಡಿದ್ದಾರೆ. ಜೊತೆಗೆ ಮತ್ತೆ ಇಂತಹ ಘಟನೆ ನಡೆಯಲು ಅವಕಾಶ ಕೊಡಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply