ಜಮ್ಮು ಕಾಶ್ಮೀರ: ಪೂಂಚ್‌ ಉಗ್ರ ದಾಳಿಗೆ ಕುಮ್ಮಕ್ಕು ನೀಡಿದ್ದ ಸ್ಥಳೀಯ ನಿವಾಸಿ ಬಂಧನ!

masthmagaa.com:

ಜಮ್ಮು ಕಾಶ್ಮೀರದ ಪೂಂಚ್‌ ಬಳಿ ಸೇನೆ ಮೇಲೆ ದಾಳಿ ನಡೆಸಿದ್ದ ಉಗ್ರರಿಗೆ ಸ್ಥಳೀಯರೇ ಸಹಾಯ ಮಾಡಿದ್ರು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಗುರ್ಸಾಯ್‌ ಹಳ್ಳಿಯ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ದಾಳಿ ನಡೆಸಲು ಬೇಕಾದ ಶಸ್ತ್ರಾಸ್ತ್ರಗಳನ್ನ ಡ್ರೋನ್‌ ಮೂಲಕ ಪಾಕ್‌ನಿಂದ ರೀಸಿವ್‌ ಮಾಡ್ಕೊಂಡು ಬಳಿಕ ಅದನ್ನ ಉಗ್ರರಿಗೆ ಕೊಟ್ಟಿದ್ದಾಗಿ ಖುದ್ದು ನಿಸಾರ್‌ ಅಹ್ಮದ್‌ ಒಪ್ಪಿಕೊಂಡಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ. ಜೊತೆಗೆ ಈ ನಿಸಾರ್‌ ಅಹ್ಮದ್‌ 1990 ರಿಂದಲೂ ಉಗ್ರರ ಪರವಾಗಿ ಗ್ರೌಂಡ್‌ ವರ್ಕ್‌ ಮಾಡ್ತಿದ್ದು, ಭಯೋತ್ಪಾದಕರಿಗೆ ಬೇಕಾದ ವಾಹನಗಳನ್ನ ಒದಗಿಸ್ತಿದ್ದ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply