ಸಿಎಂ ತೆರಿಗೆ ಹಂಚಿಕೆ ಆರೋಪಕ್ಕೆ ಅಂಕಿ-ಅಂಶಗಳ ಮೂಲಕ ಉತ್ತರ ಕೊಟ್ಟ ಪ್ರಹ್ಲಾದ್‌ ಜೋಶಿ!

masthmagaa.com:

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಸುದ್ದಿಗೋಷ್ಠಿಯಲ್ಲೇ ರಾಜ್ಯಕ್ಕೆ ಬರಬೇಕಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ಇದೀಗ ಇದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಅಂಕಿ ಅಂಶಗಳ ವಿವರಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. 2009ರಿಂದ 2014ರ ಡೆವಲ್ಯೂಷನ್‌ ಫಂಡ್‌ ಅಂದ್ರೆ ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಶೇ.148ರಷ್ಟು ಜಾಸ್ತಿಯಾಗಿದೆ. 2014ರಿಂದ 2019ರ ಅವಧಿಯಲ್ಲಿ ಶೇ.129ರಷ್ಟು ಹೆಚ್ಚಾಗಿದೆ ಅಂತ ತಿರುಗೇಟು ನೀಡಿದ್ದಾರೆ. ಜೊತೆಗೆ ಯಾವ ಯಾವ ವರ್ಷದಲ್ಲಿ ಎಷ್ಟು ಹಣ ಬಂದಿದೆ ಅನ್ನೊದನ್ನ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಮೊದಲು 700 ರಿಂದ 800 ಕೋಟಿ ರೂಪಾಯಿ ಬರ್ತಿತ್ತು. ನಮ್ಮ ಕಾಲದಲ್ಲಿ 5000-7000 ಕೋಟಿ ರೂಪಾಯಿ ಬಂದಿದೆ. 200-10ರಲ್ಲಿ 2,476 ಕೋಟಿ ಹಣ ಬಂದಿದೆ. ಆದ್ರೆ 2019-20ರಲ್ಲಿ 7,578 ಕೋಟಿ ರೂಪಾಯಿ ಬಂದಿದೆ. 2021-22ರಲ್ಲಿ 7,862 ಕೋಟಿ ರೂಪಾಯಿ ಬಂದಿದೆ. ಪ್ರತಿ ವರ್ಷ ಡೆವಲ್ಯೂಷನ್‌ ಫಂಡ್‌ನಲ್ಲಿ ಜಾಸ್ತಿ ಆಗ್ತಿದೆ ಅಂತ ಅಂಕಿ-ಅಂಶಗಳ ಮೂಲಕ ಸಿದ್ದರಾಮಯ್ಯ ಅವರ ಆರೋಪಗಳಿಗೆ ಉತ್ತರ ನೀಡಿದ್ದಾರೆ.

-masthmagaa.com

Contact Us for Advertisement

Leave a Reply