ಅಪರಾಹ್ನ ಪೂರ್ವಾಹ್ನಗಳ ವ್ಯತ್ಯಾಸ ಗೊತ್ತಿಲ್ಲ: ರಾಹುಲ್‌ ಮೇಲೆ ಪ್ರಣಬ್‌ ಮುಖರ್ಜಿ ಮುನಿಸಿಕೊಂಡಿದ್ರ?

masthmagaa.com:

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ನೀರಸ ಪ್ರದರ್ಶನದ ನಂತರ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವ್ರ ವರ್ತನೆ ತಮ್ಮ ತಂದೆಗೆ ಇಷ್ಟ ಆಗ್ಲಿಲ್ಲ ಅಂತ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪುತ್ರಿ ಶರ್ಮಿಷ್ಟ ಮುಖರ್ಜಿ ಹೇಳಿದ್ದಾರೆ. ಚುನಾವಣೆ ಸೋಲಿನ ನಂತರ ರಾಹುಲ್‌ ಸರಿಯಾಗಿ ಸದನದಲ್ಲಿ ಭಾಗಿಯಾಗ್ಲಿಲ್ಲ. ಅಲ್ಲದೆ 2013ರಲ್ಲಿ ಲಾಲು ಪ್ರಸಾದ್‌ ಯಾದವ್‌ಗೆ ಮೇವು ಹಗರಣದಲ್ಲಿ ಶಿಕ್ಷೆ ಆಗದಂತೆ ತಡೆಯೋಕೆ ಪ್ರಯತ್ನ ಪಟ್ಟಿದ್ರು. ಇವೆಲ್ಲ ವಿಚಾರಗಳಿಂದ ಪ್ರಣಬ್ ಮುಖರ್ಜಿ ಅವ್ರಿಗೆ ರಾಹುಲ್‌ ಬಗ್ಗೆ ಅಸಮಾಧಾನ ಇತ್ತು ಅಂತ ಮುಖರ್ಜಿ ಪುತ್ರಿ ಹೇಳಿದ್ದಾರೆ. ಅಲ್ಲದೆ ಒಮ್ಮೆ ರಾಹುಲ್‌-ಪ್ರಣಬ್‌ರ ಭೇಟಿಗೆ ಸಮಯ ನಿಗದಿಯಾಗಿತ್ತು. ಸಂಜೆ ಬರಬೇಕಿದ್ದ ರಾಹುಲ್‌, ಮುಂಜಾನೆ ಪ್ರಣಬ್‌ ನಿವಾಸಕ್ಕೆ ಬಂದಿದ್ರು. a.m ಹಾಗೂ p.m ಅಂದ್ರೆ ಅಪರಾಹ್ನ ಪೂರ್ವಾಹ್ನಗಳ ಮಧ್ಯೆ ವ್ಯತ್ಯಾಸ ತಿಳಿಯದೇ ಇರೋ ವ್ಯಕ್ತಿ ಪ್ರಧಾನಿ ಮಂತ್ರಿ ಕಚೇರಿಯನ್ನ ನಡೆಸ್ತಾರೆ ಅಂತ ಹೇಗೆ ಭರವಸೆ ಇಟ್ಕೋಳೋದು? ಅಂತ ಪ್ರಣಬ್‌ ಅಸಮಾಧಾನಗೊಂಡಿದ್ರು. ಇವೆಲ್ಲವನ್ನು ʻಪ್ರಣಬ್ ಮೈ ಫಾದರ್:‌ ಅ ಡಾಟರ್‌ ರಿಮೆಂಬರ್ಸ್‌ʼ ಪುಸ್ತಕದಲ್ಲಿ ಬರೆದಿದ್ದೇನೆ ಅಂತ ಶರ್ಮಿಷ್ಟ ಮುಖರ್ಜಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply